ಗೋಡೆ ಮೇಲೆ ಮೂತ್ರ ವಿಸರ್ಜಿಸಿದ ಸಚಿನ್ ಹತ್ಯೆ

youth-urinates-on-neighbour-wall-gets-killed
ನವದೆಹಲಿ,ಏ.20: ಹುಷಾರು! ಎಷ್ಟೇ ಅವಸರವಾಗಿದ್ದರೂ ಸ್ವಲ್ಪ ತಡೆದುಕೊಳ್ಳಿ. ಉಶ್ಶಿ ಮಾಡುವ ಮುನ್ನ ಆ ಕಡೆ ಈ ಕಡೆ ನೋಡಿಕೊಂಡು, ಜಾಗ ಯಾವುದೆಂದು ಖಚಿತಪಡಿಸಿಕೊಂಡು ಉಶ್ಶಿ ಮಾಡಿ. ಇಲ್ಲವಾದರೆ...18 ವರ್ಷದ ಸಚಿನ್ ಗೆ ಆದ ಗತಿಯೇ ಆದೀತು.

ಏಪ್ರಿಲ್ 17ರ ರಾತ್ರಿ 11 ಗಂಟೆಯಲ್ಲಿ ಪೂರ್ವ ದೆಹಲಿಯ ಪಾಂಡವನಗರದ ಮಂಡವಲಿಯಲ್ಲಿ ಏನಾಯಿತೆಂದರೆ... ಹದಿಹರಯದ ಸಚಿನ್ ಮಾರುಕಟ್ಟೆಗೆ ತೆರಳಿ ವಾಪಸಾಗುತ್ತಿದ್ದ ವೇಳೆ ನಿಸರ್ಗದ ಕರೆ ತಾಳಲಾರದೆ ಪಕ್ಕದ ಮನೆಯ ಗೋಡೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಎನ್ನಲಾಗಿದೆ.

ಇದರಿಂದ ಕುಪಿತಗೊಂಡ ವಿಜಯ್ ಮತ್ತು ಅಜಯ್ ಎಂಬವರು ಆತನನ್ನು ಹಿಂಬಾಲಿಸಿಕೊಂಡು ಹೋಗಿ, ಜಗಳ ನಡೆಸಿದರೆನ್ನಲಾಗಿದೆ. ಜಗಳ ಹಿಂಸಾಚಾರಕ್ಕೆ ತಿರುಗಿ, ಆರೋಪಿಗಳು ಸಚಿನ್ ಗೆ ಥಳಿಸಿದರೆಂದು ಪೊಲೀಸರು ತಿಳಿಸಿದ್ದಾರೆ.

ದುರ್ದೈವಿ ಸಚಿನ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಗಂಭೀರವಾಗಿ ಗಾಯಗೊಂಡಿದ್ದ ಆತ ಸಾವನ್ನಪ್ಪಿದನೆಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ಇಬ್ಬರ ಮೇಲೂ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+