ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಅಶಿಸ್ತು ಕಿರಿಕಿರಿ: ಗಡ್ಕರಿ

By Srinath
|
Google Oneindia Kannada News

yeddyurappa-indiscipline-intolerable-gadkari
ನವದೆಹಲಿ, ಏ.20: ಅತ್ತ ಸುಪ್ರೀಂಕೋರ್ಟಿನ ಕೇಂದ್ರ ಉನ್ನತಾಧಿಕಾರ ಸಮಿತಿಯ ತೂಗುಕತ್ತಿ ಯಡಿಯೂರಪ್ಪ ನೆತ್ತಿ ಮೇಲೆ ಠಳಾಯಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ಗಡ್ಕರಿ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೆ ಸಿಎಂ ಪಟ್ಟ ಸಿಗದ್ದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಗಾಗ್ಗೆ ಹಾರಿಸುತ್ತಿರುವ ಬಂಡಾಯದ ಬಾವುಟ ಗಡ್ಕರಿಯನ್ನು ಅಸಮಾಧಾನದ modeಗೆ ತಳ್ಳಿದೆ.

'ಯಡಿಯೂರಪ್ಪ ನಿರಪರಾಧಿ ಎಂಬುದು ನನಗೆ ಗೊತ್ತಿದೆ. ಅದಕ್ಕೆ ಇತ್ತೀಚಿಗೆ ಹೊರಬಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪೇ ಸಾಕ್ಷಿ. ಅವರ ಬಗ್ಗೆ ನನಗೆ ಅನುಕಂಪವಿದೆ. ಆದರೆ ಇದಾದ ಬಳಿಕ ಅವರು ಏನು ಮಾಡಿದರೋ ಅದು ಸರಿಯಲ್ಲ' ಎಂದು ಗಡ್ಕರಿ ಅವರು ಬಿಎಸ್‌ವೈ ಅವರ ರೆಸಾರ್ಟ್‌ ರಾಜಕಾರಣ ಮತ್ತು ಭಿನ್ನಮತ ರಾಜಕೀಯದ ಬಗ್ಗೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

NDTV 'Walk the Talk ‌' ಕಾರ್ಯಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಗಡ್ಕರಿ, 'ಯಡಿಯೂರಪ್ಪ ಅವರ ಬಂಡಾಯ ಪಕ್ಷಕ್ಕೆ ನಿಜವಾಗಿಯೂ ಒಳ್ಳೆಯದಲ್ಲ. ಅಶಿಸ್ತು ಎಂದಿಗೂ ಪಕ್ಷಕ್ಕೆ ಒಳ್ಳೆಯ ಹೆಸರು ತರದು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷದ ಶಿಸ್ತಿನ ಸಿಪಾಯಿಯಾಗಿರಬೇಕು. ಒತ್ತಡದ ಸಮಯದಲ್ಲಿ ಯಾವುದೇ ನಿರ್ಧಾರವನ್ನೂ ಕೈಗೊಳ್ಳಲಾಗದು. ಯಡಿಯೂರಪ್ಪ ಅವರಿಗೆ ನೀಡಬೇಕಾದ ಸ್ಥಾನಮಾನಗಳ ಬಗ್ಗೆ ಪಕ್ಷದ ಹೈಕಮಾಂಡ್‌ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ' ಎಂದೂ ಗಡ್ಕರಿ ಹೇಳಿದ್ದಾರೆ.

English summary
The indiscipline shown by BS Yeddyurappa, while vying for Karnataka CM Ship is intolerable says Nitin Gadkari, BJP President.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X