ಎಲ್ಲ ಶಾಸಕರಿಗೂ ಟಿಕೆಟ್: ಈಶ್ವರಪ್ಪ ಪುನರುಚ್ಚಾರ
ಬೆಂಗಳೂರು,
ಏ.18: ಬಿಜೆಪಿಯ ಎಲ್ಲ ಹಾಲಿ ಶಾಸಕರಿಗೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು. ಈ ಬಗ್ಗೆ ಯಾರಿಗೂ ಸಂಶಯ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಪುನರುಚ್ಚರಿಸಿದ್ದಾರೆ. id="toptextpromo">ಬುಧವಾರ
ಸುದ್ದಿಗಾರರ ಜತೆ ಮಾತನಾಡಿದ ಅವರು, '120 ಶಾಸಕರ ಪೈಕಿ ಒಂದೋ ಎರಡೂ ವ್ಯತ್ಯಾಸ ಬಿಟ್ಟರೆ ಎಲ್ಲರಿಗೂ ಟಿಕೆಟ್ ದೊರೆಯಲಿದೆ. ಅದರ ಬಗ್ಗೆ ಯಾರಿಗೂ ಅನುಮಾನ ಬೇಡ' ಎಂದು ಸ್ಪಷ್ಟಪಡಿಸಿದರು.150
ಕ್ಷೇತ್ರಗಳಲ್ಲಿ
ಬಿಜೆಪಿಗೆ
ಜಯ:'ನಮ್ಮ
ಹಿರಿಯರ
ತಪ್ಪಸ್ಸಿನ
ಫಲವಾಗಿ
ಹಾಗೂ
ನೂರಾರು
ಜನರ
ಬೆವರಿನ
ಫಲದಿಂದ
ಬೀಜವಾಗಿದ್ದ
ಪಕ್ಷ
ಈಗ
ಮರವಾಗಿ
ಬೆಳೆದಿದೆ.
ಪಕ್ಷದ
ಶಾಸಕರು
ತಮ್ಮ
ಕ್ಷೇತ್ರಗಳಲ್ಲಿ
ಪ್ರಾಮಾಣಿಕವಾಗಿ
ಅಭಿವೃದ್ಧಿ
ಕಾರ್ಯಗಳನ್ನು
ಮಾಡಿದ್ದಾರೆ.
ಪಕ್ಷದ
ಸಂಘಟನೆಯನ್ನೂ
ಮಾಡಿದ್ದಾರೆ'
ಎಂದು
ಈಶ್ವರಪ್ಪ
ಮೆಚ್ಚುಗೆ
ವ್ಯಕ್ತಪಡಿಸಿದರು.
id='are-slot-1'
class='oiad
oi-axt
oiadv'>
id='top-searched-articles'>
'ಇತ್ತೀಚೆಗೆ
ಪಕ್ಷದಲ್ಲಿನ ಗೊಂದಲಗಳಿಂದ ಕಾರ್ಯಕರ್ತರು ಮತ್ತು ಹಿತೈಷಿಗಳು ನೊಂದಿದ್ದಾರೆ. ಅವರಲ್ಲಿ ಯಾವುದೇ ಗೊಂದಲ ಇಲ್ಲ. ಗೊಂದಲ ಇರುವುದು ನಾಯಕರಲ್ಲಿ' ಎಂದು ಅವರು ಹೇಳಿದರು. 'ಪಕ್ಷದ ಗೊಂದಲಗಳು ಆದಷ್ಟು ಬೇಗ ನಿವಾರಣೆಯಾಗಿ ಮುಂದಿನ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಲಿದೆ' ಎಂದೂ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.











Click it and Unblock the Notifications