ಗೋಪಿನಾಥ್ ಮತ್ತೆ ವಿಮಾನ ಓಡಿಸುತ್ತಾರಂತೆ !

ಉದ್ಯಮಿ ಗೋಪಿನಾಥ್ 2007ರಲ್ಲಿ ಏರ್ ಡೆಕ್ಕನ್ ಸಂಸ್ಥೆಯನ್ನು ಕಿಂಗ್ ಫಿಷರ್ ನ ವಿಜಯ್ ಮಲ್ಯಗೆ ಮಾರಾಟ ಮಾಡಿದ್ದರು. ಕಿಂಗ್ ಫಿಷರ್ ರೆಡ್ ವಿಮಾನಯಾನವನ್ನು ನಿಲ್ಲಿಸಿದ ವಿಜಯ್ ಮಲ್ಯ, ಗೋಪಿನಾಥ್ ಅವರ ಕಡಿಮೆದರದಲ್ಲಿ ವಿಮಾನಯಾನ ಕನಸಿಗೆ ತಣ್ಣಿರೆರಚಿದರು.
ನಂತರ ಗೋಪಿನಾಥ್ ಡೆಕ್ಕನ್ 360 ಆರಂಭಿಸಿದರೂ ಹೆಚ್ಚಿನ ಲಾಭ ಗಳಿಸುವಲ್ಲಿ ವಿಫಲರಾದರು. ಮಲ್ಯರಿಂದ ಏರ್ ಡೆಕ್ಕನ್ ಮತ್ತೆ ಪಡೆಯುವ ಮಾತುಕತೆಗೆ ಮುಂದಾದರೂ ಯಾಕೋ ಗೋಪಿನಾಥ್ ಮನಸ್ಸು ಮಾಡಲಿಲ್ಲ.
ಕಿಂಗ್ ಫಿಷರ್ ಲೈಸನ್ಸ್ ನಡಿಯಲ್ಲಿ ಡೆಕ್ಕನ್ ವಿಮಾನಯಾನವನ್ನು ವಿದೇಶಿ ಪ್ರಯಾಣಕ್ಕೂ ಬಳಸಲು ಮಲ್ಯ ಚಿಂತಿಸಿರುವುದು ಗೋಪಿನಾಥ್ ಅವರಿಗೆ ಬೇಸರ ತರಿಸಿದೆಯಂತೆ.
ಜನ ಸಾಮಾನ್ಯರ ವಿಮಾನಯಾನ ಕನಸು ನನಸು ಮಾಡಿ ರು.1ರಲ್ಲೇ ವಿಮಾನದಲ್ಲಿ ಪ್ರಯಾಣಿಸಿ ಎಂದು ಘೋಷಿಸಿದ್ದ ಗೋಪಿನಾಥ್ ನುಡಿದಂತೆ ಮಾಡಿ ತೋರಿಸಿದರು. ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ.. ಆಲ್ ದಿ ಬೆಸ್ಟ್












Click it and Unblock the Notifications