ಅಲ್ಲಿದೆ ನಮ್ಮನೆ; ಇಲ್ಲಿ ಸುಮ್ಮನೆ- ರೆಡ್ಡಿ

'ಶ್ರೀರಾಮುಲು ಮತ್ತೆ ಬಿಜೆಪಿ ಸೇರಲಿದ್ದಾರೆ ಎಂದು ಕರುಣಾಕರರೆಡ್ಡಿ ಯಾವ ಆಧಾರ ಹಾಗೂ ಯಾವ ಉದ್ದೇಶದಿಂದ ಹೇಳಿದ್ದಾರೋ ಅರ್ಥವಾಗುತ್ತಿಲ್ಲ. ಆದರೆ ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಯಾವುದೇ ಕಾರಣಕ್ಕೂ ಶ್ರೀರಾಮುಲು ಮತ್ತೆ ಬಿಜೆಪಿ ಸೇರಲ್ಲ' ಎಂದು ಜಿ. ಸೋಮಶೇಖರ ಭಾನುವಾರ ಸ್ಪಷ್ಟನೆ ನೀಡಿದ್ದಾರೆ.
ಮಾನಸಿಕವಾಗಿ ಬಿಎಸ್‌ಆರ್ ರಾಮುಲು ಜತೆಗೇ: 'ಶ್ರೀರಾಮಲು, ಜನಾರ್ಧನ ರೆಡ್ಡಿ ಅವರೇ ನಮ್ಮ ನಾಯಕರು. ಅವರ ಆಣತಿಯಂತೆ ನಾನು ನಡೆದುಕೊಳ್ಳುವೆ' ಎಂದೂ ಸೋಮಶೇಖರ ರೆಡ್ಡಿ ಹೇಳಿದ್ದಾರೆ. ನಾನು ಬಾಹ್ಯವಾಗಿ ಬಿಜೆಪಿ ಪಕ್ಷದಲ್ಲಿದ್ದೇನೆ ಅಷ್ಟೇ. ಆದರೆ ಮಾನಸಿಕವಾಗಿ ಶ್ರೀರಾಮಲು ಅವರ ಬಿಎಸ್‌ಆರ್ ಪಕ್ಷದಲ್ಲಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ಕಾರಣವೇನು?: ಈ ಹಿಂದೆ ನನ್ನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಆಮೇಲೆ ಹಿಂಪಡೆಯಲಾಯಿತು. ಉಚ್ಛಾಟಿಸಲೂ ನಾನು ಏನು ತಪ್ಪು ಮಾಡಿರಲಿಲ್ಲ. ಅಲ್ಲದೇ ಅದನ್ನು ಹಿಂಪಡೆಯುವಂತೆ ಒತ್ತಡ ಕೂಡ ಹಾಕಿರಲಿಲ್ಲ. ಉಚ್ಛಾಟಿಸಿ ಅವರೇ ಅದನ್ನು ಹಿಂಪಡೆದರು. ಇಂತಹ ನಡೆಗಳಿಂದ ನನಗೆ ಮಾನಸಿಕ ನೋವು ತಂದಿದೆ. ಹೀಗಾಗಿ ನಾನು ಈಗಲೂ ಮಾನಸಿಕವಾಗಿ ಬಿಎಸ್‌ಆರ್ ಪಕ್ಷದಲ್ಲಿದ್ದೇನೆ ಎಂದರು.












Click it and Unblock the Notifications