ಎಚ್ಡಿಕೆ, ಚೆನ್ನಿಗಪ್ಪ ವಿರುದ್ಧ ಚಾರ್ಚ್ ಶೀಟ್ ಸಲ್ಲಿಕೆ

Kumaraswamy, Chennigappa chargesheeted
ಬೆಂಗಳೂರು, ಏ.16: ಅರ್ಕಾವತಿ ಬಡಾವಣೆಯ ಬಿಡಿಎ ನಿವೇಶನಗಳನ್ನು ಅಕ್ರಮವಾಗಿ ಡಿನೋಟಿಫೈ ಮಾಡಿದ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ, ಮಾಜಿ ಶಾಸಕ ಚೆನ್ನಿಗಪ್ಪ ಮತ್ತು ಇನ್ನಿಬ್ಬರ ವಿರುದ್ಧ ಲೋಕಾಯುಕ್ತ ಪೊಲೀಸರು ಸೋಮವಾರ(ಏ.16) ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಚಾಮರಾಜನಗರದ ಎಂಎಸ್ ಮಹದೇವಸ್ವಾಮಿ ಎಂಬುವವರು ಜ.2ರಂದು ದಾಖಲಿಸಿದ್ದ ಖಾಸಗಿ ದೂರಿನ ಅನ್ವಯ ಲೋಕಾಯುಕ್ತ ಕೋರ್ಟ್ ತನಿಖೆಗೆ ಆದೇಶ ನೀಡಿತ್ತು. ತನಿಖಾಧಿಕಾರಿ ರವಿಶಂಕರ್ ಅವರು 52 ಪುಟಗಳ ಚಾರ್ಜ್ ಶೀಟ್ ಹಾಗೂ 1600 ಪುಟಗಳ ದಾಖಲೆಗಳುಳ್ಳ ವರದಿಯನ್ನು ಲೋಕಾಯುಕ್ತ ಕೋರ್ಟಿಗೆ ಸಲ್ಲಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಮನ್ಸ್ ನೀಡಬೇಕೇ? ಬೇಡವೇ? ಎಂಬುದರ ಬಗ್ಗೆ ಏ.21ರಂದು ಕೋರ್ಟ್ ಆದೇಶ ನೀಡಲಿದೆ.

ಐಪಿಸಿ ಸೆಕ್ಷನ್ 182, 420ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅನ್ವಯ ಪ್ರಕರಣದ ತನಿಖೆ ನಡೆಸಲಾಗಿತ್ತು.

2007ರ ಅಕ್ಟೋಬರ್‌ನಲ್ಲಿ ಥಣಿಸಂದ್ರ ಗ್ರಾಮದಲ್ಲಿ 3.8 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಲು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶಿಸಿದ್ದರು. ಅಂದಿನ ಅರಣ್ಯ ಸಚಿವರಾಗಿದ್ದ ಚೆನ್ನಿಗಪ್ಪ ಕೂಡ ಕುಮಾರಸ್ವಾಮಿ ಜೊತೆ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಡಿನೋಟಿಫೈ ಆದ ಜಮೀನಿನಿಂದ 44 ನಿವೇಶನಗಳನ್ನು ರೂಪಿಸಿ ಹಂಚಲಾಗಿದೆ. ಸರ್ಕಾರಕ್ಕೆ ಸುಮಾರು 50-60 ಕೋಟಿ ನಷ್ಟವಾಗಿದೆ ಎಂದು ಸರ್ಕಾರಿ ಅಭಿಯೋಜಕರಾಗಿದ್ದ ಪಂಚಾಕ್ಷರಿ ಮಠ್ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+