ಹಜ್ ಅನುದಾನಕ್ಕೆ ನಿರ್ಬಂಧ ಹೇರಿದ ಸರ್ಕಾರ

ಈವರೆಗೂ ಹಜ್ ಯಾತ್ರೆ ಕೈಗೊಂಡಿಲ್ಲವೋ ಅವರಿಗೆ ಆದ್ಯತೆ ನೀಡಲಾಗಿದೆ. ಭಾರತೀಯರ ಹಜ್ ಸಮಿತಿಯ ಮೂಲಕ ಹಜ್ ಯಾತ್ರೆಯನ್ನು ಈಗಿನಂತೆ 5 ವರ್ಷಗಳಿಗೊಮ್ಮೆ ಬದಲಾಗಿ ಜೀವಮಾನದಲ್ಲೊಮ್ಮೆ ನಿರ್ಬಂಧಿಸುವುದರಿಂದ ಒಬ್ಬ ಅಥವಾ ಒಬ್ಬಳು ಸರ್ಕಾರಿ ಸಬ್ಸಿಡಿ ಲಾಭವನ್ನು ಜೀವಮಾನದಲ್ಲಿ ಒಮ್ಮೆ ಮಾತ್ರ ಪಡೆಯುವುದನ್ನು ಖಚಿತಪಡಿಸಲಿದೆಯಲ್ಲದೇ, ಇದುವರೆಗೆ ಹಜ್ ಯಾತ್ರೆ ಮಾಡದಿರುವವರಿಗೆ ಆದ್ಯತೆ ನೀಡುವುದನ್ನು ದೃಢಪಸಲಿದೆಯೆಂದು ಕೇಂದ್ರ ಸರ್ಕಾರ ಹೇಳಿದೆ.
ಆದರೆ, 2012ನೆ ಸಾಲಿಗೆ ನೀಡಲಾಗುವ ಹಜ್ ಸಬ್ಸಿಡಿ ಮೊತ್ತವನ್ನು ಬಹಿರಂಗಪಡಿಸಲು ಸರ್ಕಾರ ನಿರಾಕರಿಸಿದೆ. ಹಾಜಿಗಳು ತಮ್ಮ ಹಜ್ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ಬಳಿಕವೇ ಅದರ ನಿಖರವಾದ ಮೊತ್ತ ತಿಳಿಯುವುದೆಂದು ಹೇಳಿದೆ.
70 ವರ್ಷಗಳ ಮೇಲಿನವರಿಗೆ ಹಾಗೂ ಈ ಹಿಂದೆ ಅರ್ಜಿ ಸಲ್ಲಿಸಿಯೂ ಅವಕಾಶ ದೊರೆಯದವರಿಗೆ ಆದ್ಯತೆ ನೀಡಲಾಗುವುದು.
ಕೇಂದ್ರ ಸರಕಾರ ನೀಡುವ ಸಬ್ಸಿಡಿ ಹಾಗೂ ರಾಜ್ಯ ಹಜ್ ಸಮಿತಿಗಳಿಗೆ ಸೀಟು ಮಂಜೂರಾತಿಗೆ ಅಳವಡಿಸುವ ಮಾನದಂಡದ ಕುರಿತು ವಿವರ ನೀಡುವಂತೆ ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ರಂಜನಾ ಪ್ರಕಾಶ್ ದೇಸಾಯಿಯವರಿದ್ದ ಪೀಠವೊಂದು ಸರಕಾರಕ್ಕೆ ನಿರ್ದೇಶನ ನೀಡಿತ್ತು.












Click it and Unblock the Notifications