ಮಧೂರು ವಿನಾಯಕ ದೇವಸ್ಥಾನದಲ್ಲಿ ಆಭರಣ ಕಳವು
ಕಾಸರಗೋಡು,
ಏ.16: ಕಾಸರಗೋಡಿನಿಂದ 8 ಕಿ.ಮೀ. ದೂರದಲ್ಲಿರುವ, ಉತ್ತರ ಕೇರಳದ ಅತ್ಯಂತ ಪ್ರಸಿದ್ಧ ಕ್ಷೇತ್ರವಾಗಿರುವ ಮಧೂರು ಸಿದ್ಧಿವಿನಾಯಕ ಶ್ರೀ ಮದ್ ಅನಂತೇಶ್ವರ ದೇವಸ್ಥಾನದಲ್ಲಿ ರೂ.2.5 ಕೋಟಿ ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. id="toptextpromo">ಭಕ್ತರು
ಇಷ್ಟದೇವರಿಗೆ ಕಾಣಿಕೆ ರೂಪದಲ್ಲಿ ಅರ್ಪಿಸಿದ ಆಭರಣಗಳೇ ಕಾಣೆಯಾಗಿವೆ. ಲೆಕ್ಕಪತ್ರ ವಿಭಾಗ ವಾರ್ಷಿಕ ತಪಾಸಣೆ ನಡೆಸಿದಾಗ ಕೋಟ್ಯಂತರ ಮೌಲ್ಯದ ಆಭರಣ ಕಾಣೆಯಾಗಿರುವುದು ಗೊತ್ತಾಗಿದೆ. id='are-slot-1' class='oiad oi-axt oiadv'> id='top-searched-articles'>ಮಾರ್ಚ್
ಮೂರನೇ ವಾರದಲ್ಲಿ ದೇವಾಲಯದ ಕ್ಷೇತ್ರದ ಲೆಕ್ಕ ಪತ್ರಗಳ ಪರಿಶೀಲನೆ ನಡೆದಿತ್ತು. ಕಾಣೆಯಾದ ಆಭರಣಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಆದರೆ ದೇವಸ್ಥಾನದ ದೈನಂದಿನ ದೇವರ ಪೂಜೆಗೆ ಬಳಸುವ ಆಭರಣ, ಅಮೂಲ್ಯ ಸಾಮಗ್ರಿಗಳು ಭದ್ರವಾಗಿವೆ.











Click it and Unblock the Notifications