ಸರ್ಕಾರ vs ಉಪನ್ಯಾಸಕರು, ಪೋಷಕರು ತತ್ತರ

ಸರ್ಕಾರದ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮಣಿಯದಿರುವಂತೆ ಶಿಕ್ಷಕರಿಗೆ ಕರೆ ನೀಡಿರುವ ಪುಟ್ಟಣ್ಣ, ಇದು ಅಂತಿಮ ಹೋರಾಟ ಎಂದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೀಡುಬಿಟ್ಟಿರುವ ಸಾವಿರಾರು ಉಪನ್ಯಾಸಕರು ಅಹೋರಾತ್ರಿ ಮುಷ್ಕರಕ್ಕೆ ಮುಂದಾಗಿದ್ದಾರೆ ಎಂಬ ಸುದ್ದಿ ಬಂದಿದೆ.
ಈ ನಡುವೆ ಬಿಕ್ಕಟ್ಟು ಬೇಗ ಬಗೆಹರಿಯಲಿದೆ. ಅನುದಾನ ರಹಿತ ಕಾಲೇಜಿನ ಉಪನ್ಯಾಸಕರನ್ನು ಕರೆ ತಂದು ಮೌಲ್ಯಮಾಪನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಪೋಷಕರು ಆತಂಕಗೊಳ್ಳಬೇಕಾಗಿಲ್ಲ ಎಂದು ಶಿಕ್ಷಣ ಇಲಾಕೆ ಪ್ರಧಾನ ಕಾರ್ಯದರ್ಶಿ ಕುಮಾರ್ ನಾಯಕ್ ಹೇಳಿದ್ದಾರೆ.
ಸಿಎಂ ಸದಾನಂದ ಗೌಡ ಕೂಡಾ ಮುಷ್ಕರ ನಿರತ ಉಪನ್ಯಾಸಕರಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಎಸ್ಮಾ ಜಾರಿ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.
ಬೇಡಿಕೆ ಏನು?: 2009ರಲ್ಲಿ ನೇಮಕವಾದ 2500 ಉಪನ್ಯಾಸಕರ ಪೂರ್ವಸೇವಾ ಅವಧಿಯನ್ನು ಘೋಷಿಸಬೇಕು.
* ಪ್ರೌಡಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಪ್ರತ್ಯೇಕವಾಗಿರಬೇಕು.
* ಪಿಎಚ್ ಡಿ, ಎಂಫಿಲ್ ಪದವಿ ಪಡೆದವರಿಗೆ ಕಾಲೇಜು ಉಪನ್ಯಾಸಕರಾಗಿ ಬಡ್ತಿ ನೀಡಬೇಕು.
10 ದಿನಗಳ ಮೌಲ್ಯಮಾಪನ ಬಹಿಷ್ಕಾರದಿಂದ 1.5 ಕೋಟಿ ರು ನಷ್ಟವಾಗಿದೆ. 29,000 ರು ಸಂಬಳ ನೀಡಲಾಗುತ್ತಿದೆ. ಮುಷ್ಕರದ ಅವಧಿಯಲ್ಲೂ ಉಪನ್ಯಾಸಕರಿಗೆ ಸಂಬಳ ನೀಡಲಾಗುತ್ತಿದೆ ಎಂದು ಪಿಯೂ ಶಿಕ್ಷಣ ಮಂಡಳಿ ನಿರ್ದೇಶಕಿ ರಶ್ಮಿ ಮಹೇಶ್ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ಬೇಡಿಕೆಗಳಿಗೆ ಒಪ್ಪದಿದ್ದರೆ ಏ.23ರಿಂದ ಆರಂಭವಾಗಬೇಕಿರುವ ಎಸ್ಎಸ್ ಎಲ್ ಸಿ ಮೌಲ್ಯಮಾಪನ ಕೂಡಾ ಬಹಿಷ್ಕರಿಸಲು ಶಿಕ್ಷಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.












Click it and Unblock the Notifications