ಕುಮಾರಸ್ವಾಮಿ-ರಾಧಿಕಾ ಕೇಸು ಕ್ಲೋಸ್ ಆಗಿಲ್ಲ

ಖುದ್ದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರಿದ್ದ ನ್ಯಾಯಪೀಠವೇ ಶಶಿಧರ ಬೆಳಗುಂಬ ಎಂಬುವವರು ಸಲ್ಲಿಸಿದ್ದ PIL ಅನ್ನು ವಜಾಗೊಳಿಸಿದ್ದಾರೆ ಎಂಬ ಸುದ್ದಿ ಪ್ರಕಟವಾಗುತ್ತಿದ್ದಂತೆ 'ದಟ್ಸ್ ಕನ್ನಡ' ಓದುಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಂಗೈ ಹುಣ್ಣಿಗೆ ಕನ್ನಡಿ ಏಕೆ? CJ ಅವರೇ ಇಂತಹ ತೀರ್ಪು ನೀಡಬಹುದಾ? ಇಡೀ ಪ್ರಪಂಚಕ್ಕೆ ಗೊತ್ತಿರುವುದು ನ್ಯಾಯಾಲಯಕ್ಕೆ ಗೊತ್ತಾಗ್ಲಿಲ್ವ ಎಂದು ಕಿಡಿಕಾರಿದರು. ಯಾರೋ ಮಾಡಿರುವ ತಪ್ಪಿನ ಬಗ್ಗೆ ಕಂಠ ಶೋಷಣೆ ಮಾಡಿಕೊಂಡರು.
ಆದರೆ ಅರೆ ಕ್ಷಣ ಆಲೋಚಿಸಿ. ಖುದ್ದು ಮುಖ್ಯ ನ್ಯಾಯಮೂರ್ತಿಗೇ ಸತ್ಯ ಏನೆಂಬುದು ತಿಳಿದಿದ್ದರೂ ನ್ಯಾಯಾಲಯಕ್ಕೆ ಅಗತ್ಯವಾಗಿ ಬೇಕಾಗುವುದು ಸಾಕ್ಷ್ಯವಷ್ಟೇ. ಸಾಕ್ಷ್ಯವಿಲ್ಲದೆ ಸಾವಿರಾರು ಕೇಸುಗಳು ನಮ್ಮ ಘನ ನ್ಯಾಯಾಲಯಗಳಲ್ಲಿ ದಿನಾ ಬಿದ್ದು ಹೋಗುವುದನ್ನು ಕೇಳುತ್ತಿರುತ್ತೇವೆ. ಅಂತಹುದರಲ್ಲಿ CJ ಆದರೇನು, ಅವರೆದುರು ಸಮರ್ಪಕ ಸಾಕ್ಷ್ಯವಿಲ್ಲದ ಕಾರಣ ಅಸಹಾಯಕರಾಗಿ ಕೇಸು ಬರಕಾಸ್ತು ಮಾಡಿದರು ಅಷ್ಟೆ.
ಇನ್ನೊಂದು ವಿಷಯ ಏನಪಾ PIL ಸಲ್ಲಿಸಿದ ಬಳಿಕ 'ತಪ್ಪಿನ ಅರಿವಾಗಿ' ಯಾವುದೋ 'ಕುಮಾರ' ಪ್ರೇರಣೆಯಿಂದ ಕೇಸು ವಾಪಸ್ಸು ತೆಗೆದುಕೊಳ್ಳುವ ಧಾವಂತಕ್ಕೆ ಸಿಲುಕಿದರೋ ಏನೋ ಸ್ವತಃ ಅರ್ಜಿದಾರರಿಗೇ (ಶಶಿಧರ ಬೆಳಗುಂಬ) ಕೇಸು ಮುಂದುವರಿಯುವುದು ಬೇಕಾಗಿರಲಿಲ್ಲ ಅನಿಸುತ್ತದೆ. ಹಾಗೆಂದೇ ಕೋರ್ಟಿಗೆ ಸಲ್ಲಿಸಿದ ದಾಖಲೆಗಳಿಗೆ ಕನಿಷ್ಠ ತಮ್ಮ ಸಹಿ ಹಾಕುವ ಜವಾಬ್ದಾರಿಯನ್ನೂ ಅವರು ನಿಭಾಯಿಸಲಿಲ್ಲ.












Click it and Unblock the Notifications