ಭೂಕಂಪ ದಿನಾ ಆಗ್ತಾನೇ ಇರುತ್ತೆ ತಲೆ ಕೆಡಿಸ್ಕೋಬೇಡಿ

ಈಗ ಎಲೆಕ್ಟ್ರಾನಿಕ್ ಮಾಧ್ಯಮಗಳು ಪುರುಸೊತ್ತಿಲ್ಲದಂತೆ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಎಲ್ಲೋ ಭೂಮಿ ಸಣ್ಣಗೆ ಕಂಪಿಸಿದರೂ ಅದೇ ದೊಡ್ಡ ಸುದ್ದಿಯಾಗುತ್ತದೆ. ಸತ್ಯಾಸತ್ಯತೆಗಳನ್ನು ತಿಳಿಯುವ ಮುನ್ನವೇ ಜನ ಮನೆ ಮಠ ಬಿಟ್ಟು ಓಡುವಂತಹ ಪರಿಸ್ಥಿತಿ ಎದುರಾಗಿದೆ.
ಹವಾಮಾನ ಇಲಾಖೆಯ ವೆಬ್‌ಸೈಟ್ ನೋಡಿದರೆ ಸತ್ಯ ಏನು ಎಂಬುದು ನಿಮ್ಮ ಗಮನಕ್ಕೂ ಬರುತ್ತದೆ. ಈ ವೆಬ್‌ಸೈಟ್‌ನಲ್ಲಿ ಪ್ರತಿನಿತ್ಯ ಭೂಮಿ ಕಂಪಿಸಿದ ಪ್ರಮಾಣವನ್ನು ದಾಖಲು ಮಾಡಿ ಪ್ರಕಟಿಸಲಾಗುತ್ತದೆ. ಭೂಕಂಪ ಸಂಭವಿಸಿದರೆ ಏನು ಮಾಡಬೇಕು? ಏನು ಮಾಡಬಾರದು? ಎಂಬ ವಿವರಗಳೆಲ್ಲವೂ ಇಲ್ಲಿವೆ.
ಮಹಾರಾಷ್ಟ್ರದ ರತ್ನಾಗಿರಿ ಬಳಿ 10 ಕಿ.ಮೀ ಆಳದಲ್ಲಿ ಭೂಮಿ ಶನಿವಾರ (ಏ.14) ಕೂಡ ಕಂಪಿಸಿದೆ. ಇದರೆ ತೀವ್ರತೆ 4.0 ಎಂದು ದಾಖಲಾಗಿದೆ. ಈ ಪ್ರಮಾಣದ ಕಂಪನ ಮನುಷ್ಯನ ಅರಿವಿಗೆ ಅಷ್ಟಾಗಿ ಬರುವುದಿಲ್ಲ.
ಸುನಾಮಿ ಸೇರಿದಂತೆ ಹವಾಮಾನ ವೈಪರೀತ್ಯಗಳ ಬಗ್ಗೆ ಇಲ್ಲಿಂದ ಮಾಹಿತಿಯನ್ನು ಪಡೆದು ನಿಶ್ಚಿಂತೆಯಾಗಿರಿ. ತಲೆ ಕೆಡಿಸ್ಕೋಬೇಡಿ. ಹಾಗಂತ ತೀರಾ ಉದಾಸೀನತೆಯೂ ಸಲ್ಲದು. ಹುಲಿ ಬಂತು ಹುಲಿ ಎಂಬಂತಾಗಬಾರದಲ್ಲ.












Click it and Unblock the Notifications