ರೇಪ್ ಮಾಡಿ 58ರ ಚಪಲ ಚನ್ನಿಗರಾಯ ಪರಾರಿ

Women and child welfare officer rapes woman
ಬೆಂಗಳೂರು, ಏ. 14 : ಬುದ್ಧಿಮಾಂದ್ಯ ಶಾಲೆಯೊಂದಕ್ಕೆ ಅನುದಾನ ಬಿಡುಗಡೆ ಮಾಡುವುದಕ್ಕೆ ಪ್ರತಿಯಾಗಿ, ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ, ಬಲವಂತವಾಗಿ ಅತ್ಯಾಚಾರವೆಸಗಿದ್ದಾನೆ ಎಂದು 58 ವರ್ಷದ 'ಚಿರಯುವಕ'ನ ಮೇಲೆ ತುಮಕೂರಿನ ಮಹಿಳೆಯೊಬ್ಬರು ಆರೋಪ ಹೊರಿಸಿದ್ದಾರೆ.

ತುಮಕೂರಿನ ಬಟವಾಡೆ ಎಂಬಲ್ಲಿ ಸ್ಪಂದನ ಬುದ್ಧಿಮಾಂದ್ಯ ಶಾಲೆ ನಡೆಸುತ್ತಿರುವ 38 ವರ್ಷದ ಗಂಗಾ ಎಂಬುವವರೇ ಅತ್ಯಾಚಾರಕ್ಕೊಳಗಾಗಿರುವ ಮಹಿಳೆ. ನಿವೃತ್ತಿಯಾಗಲು ಕೇವಲ 2 ವರ್ಷ ಇರುವಾಗ ಇಂಥ ಘನಕಾರ್ಯ ಮಾಡಿರುವ ಮಹಾಶಯ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಧಾಕೃಷ್ಣ.

ಬುದ್ಧಿಮಾಂದ್ಯರ ಶಾಲೆ ನಡೆಸುತ್ತಿದ್ದ ಗಂಗಾ ಕೆಲ ತಿಂಗಳ ಹಿಂದೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅನುದಾನಕ್ಕಾಗಿ ಅರ್ಜಿ ಗುಜರಾಯಿಸಿದ್ದರು. ಅರ್ಜಿ ಪರಿಶೀಲಿಸಿದ ರಾಧಾಕೃಷ್ಣ ಅನುದಾನಕ್ಕೆ ಪ್ರತಿಯಾಗಿ ತನ್ನೊಂದಿಗೆ ಸಹಕರಿಸು ಎಂದು ಗಂಗಾಳನ್ನು ಬಲವಂತಪಡಿಸಿದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಆರಂಭದಲ್ಲಿ ಅನುದಾನದ ಆಸೆಯಿಂದ ಗಂಗಾ ಕೂಡ 'ಸಹಕರಿಸಲು' ಒಪ್ಪಿಗೆ ನೀಡಿದ್ದಾರೆ. ಎರಡು ಬಾರಿ ತಮ್ಮನ್ನು ತಾವು ಒಪ್ಪಿಸಿಕೊಂಡಿದ್ದರೂ ಅನುದಾನ ದೊರೆಯದಿದ್ದಾಗ ಯಲಹಂಕಕ್ಕೆ ಹೋಗಿ ವಿಚಾರಿಸಿದ್ದಾರೆ. ಆಗ, ಯಲಹಂಕದ ಕೋಗಿಲುನಲ್ಲಿರುವ ನಾರಾಯಣ ಕಂಫರ್ಟ್ಸ್ ಲಾಡ್ಜ್‌ಗೆ ಗಂಗಾಳನ್ನು ಕರೆದುಕೊಂಡು ಹೋಗಿರುವ ರಾಧಾಕೃಷ್ಣ ಬಲವಂತವಾಗಿ ಕಾಮತೃಷೆ ತೀರಿಸಿಕೊಂಡಿದ್ದಾನೆ.

ಈಗ ರಾಮಕೃಷ್ಣ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ಗಂಗಾ ಗಂಗೆಯನ್ನು ಹರಿಸುತ್ತಿದ್ದಾರೆ. ಅನುದಾನದ ಆಸೆಯಿಂದ ಶೀಲ ಕಳೆದುಕೊಂಡಿರುವುದಾಗಿ ಅವರು ಪರಿತಪಿಸುತ್ತಿದ್ದಾರೆ. ಅವರನ್ನು ಪರೀಕ್ಷೆಗಾಗಿ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ಕಳಿಸಲಾಗಿದೆ. ಹುಣಿಸೆ ಹಣ್ಣಿನಂತಿರುವ ರಾಧಾಕೃಷ್ಣ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಆದರೆ, ಈ ಘಟನೆ ಅನೇಕ ಪ್ರಶ್ನೆಗಳನ್ನು ಏಳುವಂತೆ ಮಾಡಿದೆ. ಅನುದಾನದ ಆಸೆಗಾಗಿ ತನ್ನನ್ನು ಗಂಗಾ ಒಪ್ಪಿಸಿಕೊಂಡಿದ್ದೇಕೆ? ತನ್ನನ್ನು ಒಪ್ಪಿಸಿಕೊಂಡು ಪರಸ್ಪರ ಸುಖಿಸಿದರೆ ಅತ್ಯಾಚಾರ ಹೇಗೆ ಆಗುತ್ತದೆ? ಅತ್ಯಾಚಾರ ಆಗಿದೆ ಎಂದು ಹೇಳುತ್ತಿದ್ದರೂ, ಪೊಲೀಸರಿಗೆ ದೂರು ನೀಡದೆ ಗಂಗಾ ಇದ್ದಕ್ಕಿಂದಂತೆ ಪರಾರಿಯಾಗಿದ್ದೇಕೆ? ಇದಕ್ಕೆಲ್ಲ ಉತ್ತರ ನೀಡಬೇಕಾಗಿರುವ ರಾಧಾಕೃಷ್ಣ ಅವರೆಲ್ಲಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+