ಸೋದರಿಯ ರೇಪ್: ಗುಪ್ತಾಂಗ ಕತ್ತರಿಸಿ ಕೊಲೆ
ಮುಂಬಯಿ,
ಏ.13: ತನ್ನ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ ಗೆಳೆಯನ ಮೇಲೆ ಸೇಡು ತೀರಿಸಿಕೊಳ್ಳಲು 38 ವರ್ಷದ ವ್ಯಕ್ತಿಯೊಬ್ಬ ಆತನ ಗುಪ್ತಾಂಗ ಕತ್ತರಿಸಿ, ಕೊರಳಿಗೆ ಇರಿದು ಹತ್ಯೆಗೈದ ಬರ್ಬರ ಕೃತ್ಯ ಘಾಟ್‌ಕೋಪರ್ ಪೂರ್ವದ ಪಂತ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 9ರಂದು ನಡೆದಿದೆ. id="toptextpromo">ಆರೋಪಿ
ಕಣ್ಣನ್ ಪಿಳ್ಳೆ ಈ ಬರ್ಬರ ಕೃತ್ಯ ಎಸಗಿದ್ದಾನೆ. ರಕ್ತಸಿಕ್ತ ಚೂರಿಯನ್ನು ಕೈಯಲ್ಲಿ ಹಿಡಿದುಕೊಂಡು ಕಾಮರಾಜ್ ನಗರ ಪೊಲೀಸ್ ಚೌಕಿ ಪೊಲೀಸರೆದುರು ಆತ ಶರಣಾಗಿದ್ದಾನೆ. ತನ್ನ ಸ್ನೇಹಿತ ಗೋವಿಂದನ್ ಗುಪ್ತಾಂಗ ಕತ್ತರಿಸಿ, ಹತ್ಯೆ ಮಾಡಿರುವುದಾಗಿ ಪಿಳ್ಳೆ ತಪ್ಪೊಪ್ಪಿಕೊಂಡಿದ್ದಾನೆ. ಪಿಳ್ಳೆಯನ್ನು ಬಂಧಿಸಲಾಗಿದ್ದು, ಅವನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪಂತ್‌ನಗರ ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಐದು
ವರ್ಷಗಳ ಹಿಂದೆ ಮುಂಬಯಿಗೆ ಬಂದಿದ್ದ ಗೋವಿಂದನ್‌ಗೆ ನೆಲೆಸಲು ಪಿಳ್ಳೆ ನೆಲೆ ಒದಗಿಸಿದ್ದ. ಇಬ್ಬರೂ ಜತೆಯಾಗಿ ಮೀನಿನ ವ್ಯಾಪಾರ ಮಾಡುತ್ತಿದ್ದರು. 'ಗೋವಿಂದನ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ' ಎಂದು ಸಹೋದರಿ ಹೇಳಿದಳು. ಇದರಿಂದಾಗಿ ಆತನನ್ನು ಕೊಲೆ ಮಾಡಲು ತೀರ್ಮಾನಿಸಿದ್ದೆ. ಮಂಗಳವಾರ ರಾತ್ರಿ ಹೊರಗೆ ಕರೆದುಕೊಂಡು ಹೋಗಿ ಇಬ್ಬರೂ ಮದ್ಯ ಸೇವಿಸಿದ ಬಳಿಕ ಆತನನ್ನು ಕೊಂದಿರುವುದಾಗಿ ಪಿಳ್ಳೆ ಪೊಲೀಸರಿಗೆ ಹೇಳಿದ್ದಾನೆ.











Click it and Unblock the Notifications