ಸಂಪುಟ ವಿಸ್ತರಣೆಗೆ ಸದಾ ಸಿದ್ಧ, ರೇಸ್ ನಲ್ಲಿ 10 ಪ್ಲಸ್

Sadananda Gowda
ಬೆಂಗಳೂರು, ಏ.12: ಸುಮಾರು 20ಕ್ಕೂ ಹೆಚ್ಚು ಖಾತೆಗಳನ್ನು ಹೊಂದಿರುವ ಖಾತೆಗಳನ್ನು ಹೊಂದಿರುವುದರಿಂದ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಸಾಕಪ್ಪ ಸಾಕು ಎನಿಸಿಬಿಟ್ಟಿದೆ. ಖಾತೆ ಹಂಚಿಕೆ ಅನಿರ್ವಾಯ ಎಂದು ಹೈಕಮಾಂಡ್‌ಗೆ ಸದಾನಂದ ಅವರು ಮನವರಿಕೆ ಮಾಡಿಕೊಟ್ಟು, ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದಾರೆ.

ಡಾ.ವಿ.ಎಸ್‌. ಆಚಾರ್ಯ ನಿಧನ ಹಿನ್ನೆಲೆ ಕರಾವಳಿ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲು ಸುಳ್ಯದ ಅಂಗಾರ ಅಥವಾ ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿಗೆ ಮಂತ್ರಿ ಸ್ಥಾನ ನೀಡವ ಸಾಧ್ಯತೆ ನಿಚ್ಚಳವಾಗಿದೆ.

ಇಲ್ಲೂ ಕಾಡುವ ಯಡಿಯೂರಪ್ಪ: ಸಚಿವ ಸಂಪುಟ ವಿಸ್ತರಣೆ ಕೂಡಾ ಸರಾಗವಾಗಿ ಮಾಡುವಂತಿಲ್ಲ. ಯಡಿಯೂರಪ್ಪ ಪರ ಇರುವ ಶಾಸಕರನ್ನು ಸೇರಿಸಿಕೊಳ್ಳುವುದು, ಹಾಲಿ ಸಚಿವರನ್ನು ಕಿತ್ತು ಹಾಕುವುದು ಎಲ್ಲವೂ ಯಡಿಯೂರಪ್ಪ ಅವರ ಅಕ್ರಮ ಗಣಿಗಾರಿಕೆ ಕೇಸ್ ಬಗ್ಗೆ ಸುಪ್ರೀಂಕೋರ್ಟ್ ನೀಡುವ ಆದೇಶದ ಮೇಲೆ ಅವಲಂಬಿತವಾಗಿದೆ. ಅಲ್ಲದೆ, ಯಡಿಯೂರಪ್ಪ ಬೆಂಬಲಿತ ಸಚಿವರನ್ನು ಕೈ ಬಿಡದಂತೆ ಸದಾನಂದ ಗೌಡರ ಮೇಲೆ ಒತ್ತಡವೂ ಇದೆ ಎನ್ನಲಾಗಿದ.

ಯಾವಾಗ? : ಸಿಇಸಿ ವರದಿ ಆಧಾರಿಸಿ ಸುಪ್ರೀಂಕೋರ್ಟ್ ವಿಚಾರಣೆ, ತೀರ್ಪು ಏ.15ರೊಳಗೆ ಹೊರಬೀಳುವ ನಿರೀಕ್ಷೆಯಿದೆ. ಕೋರ್ಟ್ ಆದೇಶ ನೋಡಿಕೊಂಡು ಏ.15ರ ನಂತರ ಸದಾನಂದ ಗೌಡರು ಸಂಪುಟ ವಿಸ್ತರಣೆ ಸರ್ಕಸ್ ಆರಂಭಿಸಬಹುದು.

ರೇಸ್ ನಲ್ಲಿ ಯಾರಿದ್ದಾರೆ: ತುಮಕೂರು ಭಾಗದಿಂದ ಸೊಗಡು ಶಿವಣ್ಣ, ಕೊಡಗಿನಿಂದ ಅಪ್ಪಚ್ಚು ರಂಜನ್‌, ಚಿಕ್ಕಮಗಳೂರು ಭಾಗದಿಂದ ಸಿ.ಟಿ. ರವಿ, ಜೀವರಾಜ್, ಎಂಪಿ ಕುಮಾರಸ್ವಾಮಿ...

ಮಂಗಳೂರು ಭಾಗದಿಂದ ಅಂಗಾರ, ಉಡುಪಿಯಿಂದ ಹಾಲಾಡಿ ಶ್ರೀನಿವಾಸ್‌ ಶೆಟ್ಟಿ, ಬಳ್ಳಾರಿಯಿಂದ ಆನಂದ್‌ ಸಿಂಗ್‌, ಬಿಜಾಪುರದಿಂದ ಅಪ್ಪು ಪಟ್ಟಣಶೆಟ್ಟಿ, ಬೆಂಗಳೂರಿನಿಂದ ಅರವಿಂದ ಲಿಂಬಾವಳಿ ಅಥವಾ ಎಂ. ಶ್ರೀನಿವಾಸ್‌ ಈ ಬಾರಿಯ ಮಂತ್ರಿ ಸ್ಥಾನ ಗಿಟ್ಟಿಸುವ ನಿರೀಕ್ಷೆ ಹೊಂದಿದ್ದಾರೆ.

ಇವರೆಲ್ಲರ ಜೊತೆಗೆ ಬೇಳೂರು ಗೋಪಾಲಕೃಷ್ಣ ಕೂಡಾ ರೇಸ್ ನಲ್ಲಿದ್ದು, ಸಚಿವ ಸ್ಥಾನ ಸಿಕ್ಕರೆ ಯಾವ ತ್ಯಾಗಕ್ಕೂ ಸಿದ್ಧ ಎಂದು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗಕ್ಕೆ, ಪ್ರದೇಶವಾರು ಆದ್ಯತೆ, ಕೊಡಿಗಿಗೆ ಒಂದು ಸಚಿವ ಸ್ಥಾನ ಎಂದು ಸದಾನಂದ ಗೌಡರು ಹೇಳಿದ್ದಾರೆ. ಒಟ್ಟಾರೆ ಈ ವಾರ ಮತ್ತೊಮ್ಮೆ ಬಿರುಸಿನ ರಾಜಕೀಯ ಚಟುವಟಿಕೆಗಳನ್ನು ನಿರೀಕ್ಷಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+