ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಚರ್ಚುಗಳಲ್ಲಿ ಹೆಚ್ಚುತ್ತಿರುವ ಮಕ್ಕಳ ದಬ್ಬಾಳಿಕೆ

By Prasad
|
Google Oneindia Kannada News

Child abuse continues in American Catholic churches
ನ್ಯೂಯಾರ್ಕ್, ಏ. 11 : ಭಾರತ ಸೇರಿದಂತೆ ಮಕ್ಕಳ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಲು ಯಾವ ಕಾನೂನಿನಿಂದಲೂ ಸಾಧ್ಯವಾಗಿಲ್ಲ. ದೌರ್ಜನ್ಯಕ್ಕೊಳಗಾಗಿರುವ ಮಕ್ಕಳು ತೀರಿಕೊಂಡ ಮೇಲೆ ಮಹಿಳಾ ಆಯೋಗಗಳು, ಮಕ್ಕಳ ರಕ್ಷಣಾ ಮಂಡಳಿಗಳು ಎಚ್ಚೆತ್ತುಕೊಳ್ಳುತ್ತವೆ. ಅಪರಾಧ ಎಸಗಿದವರಿಗೆ ಶಿಕ್ಷೆ ಯಾವಾಗಲೋ ಏನೋ? ಇಂಥ ಪ್ರಕರಣಗಳಿಗೆ ಅಮೆರಿಕ ಕೂಡ ಹೊರತಲ್ಲ.

ಅಮೆರಿಕಾದ ಕ್ಯಾಥೊಲಿಕ್ ಚರ್ಚ್‌ಗಳಲ್ಲಿ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯ ಚರ್ಚುಗಳನ್ನು ಜಬಡಿಹಾಕಿವೆ. ಕಳೆದ ವರ್ಷ 594 ಲೈಂಗಿಕ ದಬ್ಬಾಳಿಕೆಯ ಪ್ರಕರಣಗಳು ದಾಖಲಾಗಿದ್ದು, 114 ಮಿಲಿಯನ್ ಡಾಲರ್ ಹಣವನ್ನು ಕ್ಯಾಥೊಲಿಕ್ ಚರ್ಚ್‌ಗಳು ಪರಿಹಾರವಾಗಿ ನೀಡಿವೆ. ಈ ವರದಿಯನ್ನು ಮಂಗಳವಾರ ರೋಮನ್ ಕ್ಯಾಥೊಲಿಕ್ ಧಾರ್ಮಿಕ ದತ್ತಿ ಮಂಗಳವಾರ ನೀಡಿದೆ.

2002ರಲ್ಲಿಯೇ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯವನ್ನು ಹತ್ತಿಕ್ಕುವ ಮತ್ತು ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಅಮೆರಿಕಾದ ಕ್ಯಾಥೊಲಿಕ್ ಚರ್ಚ್ ಬಿಷಪ್‌ಗಳ ಒಕ್ಕೂಟ ಆಯೋಗವನ್ನು ರಚಿಸಿತ್ತು. ಆದರೂ ಚರ್ಚುಗಳಲ್ಲಿ ಮೇಲಿಂದ ಮೇಲೆ ದಬ್ಬಾಳಿಕೆಗಳು ನಡೆಯುತ್ತಲೇ ಇವೆ. ನಿಯಮದ ಪ್ರಕಾರ, ಹಗರಣಗಳಲ್ಲಿ ಭಾಗಿಯಾಗಿರುವ ಧರ್ಮಗುರುಗಳನ್ನು ಕಿತ್ತುಹಾಕಲಾಗಿದೆ. ಆದರೂ, ಲೈಂಗಿಕ ದೌರ್ಜನ್ಯಕ್ಕೆ ಭದ್ರವಾದ ಬೆರಣೆ ಹಾಕಲಾಗಿಲ್ಲ.

ಇನ್ನೂ ಆತಂಕಕಾರಿ ಸಂಗತಿಯೆಂದರೆ, ದೌರ್ಜನ್ಯಕ್ಕೊಳಗಾಗಿರುವವರು 10ರಿಂದ 14 ವರ್ಷದೊಳಗಿನ ಗಂಡು ಮಕ್ಕಳು. ಕಳೆದ ವರ್ಷ ದಬ್ಬಾಳಿಕೆ ನಡೆಸಿರುವ ಹೆಚ್ಚಿನ ಧರ್ಮಗುರುಗಳು ಹಿಂದೆಂದೂ ಇಂಥ ಪ್ರಕರಣಗಳಲ್ಲಿ ಭಾಗಿಯಾಗಿರಲಿಲ್ಲ. ಅವರನ್ನು ಕರ್ತವ್ಯದಿಂದ ವಿಮುಕ್ತಿಗೊಳಿಸಲಾಗಿದೆ. ಕಳೆದೆಲ್ಲ ವರ್ಷಗಳಿಗಿಂತ ಹಿಂದಿನ ವರ್ಷ ಹೆಚ್ಚು ದೌರ್ಜನ್ಯಗಳು ನಡೆದಿವೆ. ಎಷ್ಟೇ ಕ್ರಮಗಳನ್ನು ತೆಗೆದುಕೊಂಡರೂ ಮಕ್ಕಳ ರಕ್ಷಣೆ ಮರೀಚಿಕೆಯಾಗಿದೆ ಎಂದು ಈ ಅಂಕಿಅಂಶಗಳಿಂದ ಬಹಿರಂಗವಾಗಿದೆ.

English summary
Atrocities are on the rise in American Catholic Churches, in spite of commission formed to curb child abuse by clergy. In 2011 594 cases have been registered and more than $144 million has been spent as settlement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X