ಸದಾನಂದ ಗೌಡರಿಂದ ಹುಟ್ಟೂರಿಗೆ ಭರ್ಜರಿ ಕೊಡುಗೆ

ರಬ್ಬರ್ ಟೈರ್ ಘಟಕ: ತಮ್ಮ ತವರೂರು ಮಂಡೆಕೋಲು ಸಮೀಪದ ಅಜ್ಜಾವರದಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ರಬ್ಬರ್ ಟೈರ್ ಉತ್ಪಾದನಾ ಕಾರ್ಖಾನೆ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸದಾನಂದರು ಪ್ರಕಟಿಸಿದ್ದಾರೆ.
ಈ ಸಂಬಂಧ ಸಿಎಂ ಸದಾನಂದ ಗೌಡರು ಸುಳ್ಯ ತಾಲ್ಲೂಕಿನ ಮಂಡೆಕೋಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಕೈಗಾರಿಕಾ ಅಭಿವೃದ್ಧಿ ಇಲಾಖೆ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಹಾಗೂ ಸ್ಥಳೀಯ ಅಧಿಕಾರಿಗಳ ಸಭೆ ನಡೆಸಿದರು.
ಕೈಗಾರಿಕಾ ಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಖತ್ರಿ ವರದಿ ಮಂಡಿಸಿದರು. ಘಟಕಕ್ಕೆ ಕನಿಷ್ಠ 100 ಎಕರೆ ಅಗತ್ಯವಿದೆ. ಪರಿಸರ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪ ಗೌಡ ಅವರಿಗೆ ಸೂಚಿಸಲಾಯಿತು.












Click it and Unblock the Notifications