ಸ್ವತಃ ಪಾಸ್ ಮಾರ್ಕ್ ಕೊಟ್ಟುಕೊಂಡ ಸದಾನಂದ

dvs-eager-to-get-pass-marks-through-his-admin
ಮಂಡೆಕೋಲು (ಸುಳ್ಯ ತಾಲ್ಲೂಕು), ಏ.11: 'ಜನತೆ ಪರವಾಗಿಲ್ಲ ಎಂದು ಪಾಸ್ ಮಾರ್ಕ್ ನೀಡುವ ರೀತಿ ಆಡಳಿತ ನೀಡಿದ್ದೇನೆ. ಮುಂದೆಯೂ ಹುಟ್ಟೂರು ಮಂಡೆಕೋಲಿಗೆ ಗೌರವ ತರುವ ರೀತಿ ಆಡಳಿತ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ. ಅದೇ ಉಸಿರಿನಲ್ಲಿ ತಾನು ಭ್ರಷ್ಟಾಚಾರಿಯೂ ಅಲ್ಲ, ದುರಂಹಕಾರಿಯೂ ಅಲ್ಲ. ಅಧಿಕಾರ ದುರುಪಯೋಗಪಡಿಸಿಕೊಂಡವನಲ್ಲ ಎಂದೂ ಹೇಳಿಕೊಂಡಿದ್ದಾರೆ.

ಸುಳ್ಯ ತಾಲ್ಲೂಕಿನ ಮಂಡೆಕೋಲಿನಲ್ಲಿ ಒಟ್ಟು 9.25 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿರುವ ಸೇತುವೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು ವ್ಯಂಗ್ಯದ ಮಾತುಗಳ ಮೂಲಕ ರಾಜಕೀಯ ವೈರಿಗಳನ್ನು ಚುಚ್ಚಿದರು.

ಜನತಾದರ್ಶನದಲ್ಲಿ ಬರುವ ದೂರುಗಳ ಪೈಕಿ ಹೆಚ್ಚಿನವು ಅರ್ಜಿ ವಿಲೇವಾರಿ ವಿಳಂಬ ಕುರಿತವು. ಇದನ್ನು ನಿವಾರಿಸಲು ಕಡತ ವಿಲೇವಾರಿ ಕಾರ್ಯವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನು ಎರಡು ದಿನಕ್ಕೆ 500 ರಂತೆ ವಾರಕ್ಕೆ 2500 ಕ್ಕೂ ಅಧಿಕ ಕಡತಗಳನ್ನು ವಿಲೇವಾರಿ ಮಾಡುತ್ತೇನೆ ಎಂದರು.

ಪಾರದರ್ಶಕ ಆಡಳಿತ ನಡೆಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಮಹತ್ವಾಕಾಂಕ್ಷಿ ಸಕಾಲ ಯೋಜನೆ ಜಾರಿಗೆ ತರಲಾಗಿದೆ. ಸಕಾಲವನ್ನು ಪ್ರಾಯೋಗಿಕವಾಗಿ ಜಾರಿಗೆ ತಂದ ನಾಲ್ಕು ತಾಲ್ಲೂಕುಗಳಲ್ಲಿ ಒಂದೇ ತಿಂಗಳ ಅವಧೀಯಲ್ಲಿ 1.74 ಲಕ್ಷ ಅರ್ಜಿಗಳು ಬಂದಿದ್ದು, ಈ ಸಂಬಂಧ 1.66 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈ ಯೋಜನೆ ಯಶಸ್ವಿಯಾಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+