Get Updates
Get notified of breaking news, exclusive insights, and must-see stories!

ಮಾಂಸ ನಿಷೇಧ ಸುತ್ತೋಲೆ ವಿರುದ್ಧ ಅಗ್ನಿ ಕಿಡಿ

Agni Sruidhar
ಬೆಂಗಳೂರು, ಏ.10: ರಾಜ್ಯದಲ್ಲಿ ವರ್ಷದಲ್ಲಿ ಒಂಬತ್ತು ದಿನಗಳು ಮಾಂಸ ಮಾರಾಟ ನಿಷೇಧ ಮಾಡಬೇಕು ಎಂಬ ಬಿಬಿಎಂಪಿಯ ಪಶುಸಂಗೋಪನೆ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ತಕ್ಷಣ ಹಿಂಪಡೆಯಬೇಕು ಎಂದು 'ನ್ಯಾಯಕ್ಕಾಗಿ ನಾವು" ಸಂಘಟನೆ ಮತ್ತು ಸಮತಾ ಸೈನಿಕ ದಳ ಸರ್ಕಾರವನ್ನು ಒತ್ತಾಯಿಸಿದೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಪ್ರೊ.ರವಿವರ್ಮ, ಸರ್ವೋದಯ ದಿನ, ಮಹಾಶಿವರಾತ್ರಿ, ಶ್ರೀರಾಮ ನವಮಿ, ಮಹಾವೀರ ಜಯಂತಿ, ಅಂಬೇಡ್ಕರ್ ಜಯಂತಿ, ಬುದ್ದ ಪೂರ್ಣಿಮಾ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ದಿನಗಳಂದು ಮಾಂಸ ಮಾರಾಟ ನಿಷೇಧ ಮಾಡಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸರಿಯಿಲ್ಲ.

ಅಲ್ಪಸಂಖ್ಯಾತರ ಮತ್ತು ದಲಿತರ ಆಹಾರದ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸುತ್ತಿದೆ.ಇಂತಹ ಕಾನೂನುಗಳನ್ನು ಜಾರಿಗೆ ತರುವುದರಿಂದ ಪ್ರತಿ ದಿನ ಮಾಂಸ ಮಾರಾಟ ಮಾಡಿ ಜೀವನ ನಡೆಸುತ್ತಿರುವ ಹಲವು ಕುಟುಂಬಗಳಿಗೆ ತೀವ್ರ ತರದ ತೊಂದರೆಯಾಗುತ್ತದೆ ಎಂದು ಆರೋಪಿಸಿದರು.

ಅಗ್ನಿ ಶ್ರೀಧರ್ ಕಿಡಿ: ಒಂದು ನಿಗದಿತ ದಿನದಂದು ಮಾಂಸಹಾರ ನಿಷೇಧಿಸಿರುವ ಸರ್ಕಾರ ಅದೇ ರೀತಿ ವರ್ಷದಲ್ಲಿ ಒಂದು ದಿನ ರಾಜ್ಯಾದ್ಯಂತ ಎಲ್ಲ ಧರ್ಮದವರು ಮಾಂಸವನ್ನು ಸೇವಿಸುವಂತೆ ಘೋಷಿಸಬೇಕು ಎಂದು ಒತ್ತಾಯಿಸಿದರು.

ಏ.14ರಂದು ಅಂಬೇಡ್ಕರ್ ಜಯಂತಿಯಂದು ಮಾಂಸ ಮಾರಾಟ ನಿಷೇಧ ಮಾಡಿರುವುದರಿಂದ ದಲಿತ ಸಮುದಾಯದ ಹಬ್ಬ ಆಚರಿಸುವ ಅಧಿಕಾರವನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಅಗ್ನಿ ಶ್ರೀಧರ್ ಹೇಳಿದರು.

ಪತ್ರಕರ್ತ ಅಗ್ನಿ ಶ್ರೀಧರ್ ಮಾತನಾಡಿ, ಮಾಂಸ ತಿನ್ನುವ ಧರ್ಮದಲ್ಲಿ ಹುಟ್ಟಿರುವ ಮುಖ್ಯಮಂತ್ರಿ ಸ್ವಾಭಿಮಾನವಿದ್ದರೆ ಈ ಕಾನೂನನ್ನು ಹಿಂಪಡೆಯಬೇಕು, ಇಲ್ಲವಾದಲ್ಲಿ ನಿಷೇಧ ಹೇರಿರುವ ದಿನಗಳಂದು ಮಾಂಸವನ್ನು ತಿಂದು ಪ್ರತಿಭಟಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿರುವ ಶೇ. 2ರಷ್ಟು ಜೈನ ಧರ್ಮ ಜನಾಂಗದ ಹಿತ ಕಾಪಾಡಲು ಬಹುಸಂಖ್ಯಾತರ ಅಹಾರ ಕ್ರಮವನ್ನು ವಿರೋಧಿಸುವುದು ಜಾತ್ಯತೀತ ಧರ್ಮಕ್ಕೆ ಧಕ್ಕೆಯಾಗುತ್ತದೆ ಎಂದು ಅವರು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+