ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯಾ ಸುಧೀಂದ್ರ ರಾವ್ ಗೆ ನಮ್ಮ ಬೆಂಗಳೂರು ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಏ.8: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ನಾಗರಿಕರನ್ನು ಗೌರವಿಸುವ 'ನಮ್ಮ ಬೆಂಗಳೂರು ಪ್ರಶಸ್ತಿ-2011' ಸಮಾರಂಭ ವರ್ಣ ರಂಜಿತವಾಗಿ ಶನಿವಾರ(ಏ.7) ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆಯೋಜನೆಗೊಂಡಿತ್ತು.

2011ನೇ ಸಾಲಿಗೆ ನ್ಯಾ ಸುಧೀಂದ್ರ ರಾವ್ ಅವರನ್ನು ವರ್ಷದ ಬೆಂಗಳೂರಿಗ ಪ್ರಶಸ್ತಿಗೆ ಆಯ್ಕೆ ಮಾಡಿ ಗೌರವಿಸಲಾಯಿತು. ಒಟ್ಟು 9 ಸಾಧಕರಿಗೆ ಪ್ರಶಸ್ತಿ ನೀಡಿ, ಆತ್ಮೀಯವಾಗಿ ಸನ್ಮಾನಿಸಲಾಯಿತು.

ನ್ಯಾಯಾಧೀಶರು ಸಾರ್ವಜನಿಕ ವೇದಿಕೆಯಿಂದ ದೂರವಿರಬೇಕು ಎಂಬ ಕಾರಣಕ್ಕೆ ನ್ಯಾ ಸುಧೀಂದ್ರ ರಾವ್ ಅವರು ಕಾರ್ಯಕ್ರಮಕ್ಕೆ ಹಾಜರಿರಲಿಲ್ಲ. ಅವರ ಬದಲಿಗೆ ಟ್ರಸ್ಟಿ ಎಚ್ ಎಸ್ ಬಲರಾಂ ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಪುರಸ್ಕೃತರು:
* ವರ್ಷದ ಬೆಂಗಳೂರಿಗ ಪ್ರಶಸ್ತಿ: ನ್ಯಾ ಎನ್ ಕೆ ಸುಧೀಂದ್ರರಾವ್

* ಉತ್ತಮ ನಾಗರಿಕ ಪ್ರಶಸ್ತಿ:
ಉದಯ್ ವಿಜಯನ್, ಬಿಯಾಂಡ್ ಕಾರ್ಲ್ಟನ್ ಟವರ್ ಸಂಸ್ಥೆ

* ಉತ್ತಮ ಸಂಘ ಸಂಸ್ಥೆ: ಕಲಾ ದೇವರಾಜ್-ಕರುಣಾಶ್ರಯ ಸಂಸ್ಥೆ ಹಾಗೂ ಮೀನಾಕ್ಷಿ ಭರತ್-ಘನ ತ್ಯಾಜ್ಯ ನಿರ್ವಹಣಾ ದುಂಡು ಮೇಜು

* ಸರ್ಕಾರಿ ನೌಕರರು: ಡಾ.ಯುವಿ ಸಿಂಗ್-ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಲಕ್ಷ್ಮಮ್ಮ- ಪೌರ ಕಾರ್ಮಿಕರು

* ಚುನಾಯಿತ ಪ್ರತಿನಿಧಿ: ಕೃಷ್ಣ ಭೈರೇಗೌಡ-ಬ್ಯಾಟರಾಯನಪುರ ಕಾಂಗ್ರೆಸ್ ಶಾಸಕ

* ಸರ್ಕಾರಿ ಸಂಸ್ಥೆ: ಕರ್ನಾಟಕ ಲೋಕಾಯುಕ್ತ- ಯೋಗಿನಾಥ್ ರಿಜಿಸ್ಟ್ರಾರ್

* ಸಾಮಾಜಿಕ ಉದ್ಯಮಿ: ಸಾಹಸ್ ಶೂನ್ಯ ತ್ಯಾಜ್ಯ ಪರಿಹಾರ-ವಿಲ್ಮಾ ರೋಡ್ರಿಸ್

ನಮ್ಮ ನಗರದ ನಾಗರಿಕರಿಗೆ ಸಂತಸ ಮತ್ತು ಹೆಮ್ಮೆ ಪಡಲು ಇಂದು ಕಾರಣ ದೊರಕಿದೆ. ನಾಗರಿಕರ ಒಳಿತಿಗಾಗಿ ಬದ್ಧರಾಗಿರುವ ನಿಜವಾದ ನಾಯಕರನ್ನು ಕಂಡು ಹೆಮ್ಮೆ ಪಡಬಹುದು.

ಇದೇ ರೀತಿ ನಮ್ಮ ನಡುವೆ ಇರುವ ಇನ್ನು ಅನೇಕ ಸಾಧಕರನ್ನು ಗುರುತಿಸಿ, ಗೌರವಿಸುವ ಬೆಂಬಲಿಸುವ ಸ್ಪೂರ್ತಿ ಪಡೆಯುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಸಂಸದ, ನಮ್ಮ ಬೆಂಗಳೂರು ಫೌಂಡೇಶನ್ ಸಂಸ್ಥಾಪಕ ರಾಜೀವ್ ಚಂದ್ರಶೇಖರ್ ಹೇಳಿದರಿ.

ಕಳೆದ ಬಾರಿ ವಿಜೇತೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಅನಿತಾ ರೆಡ್ಡಿ, ನಟ ರಮೇಶ್ ಅರವಿಂದ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

English summary
Namma Bengaluru Award 2011-12 presented to selected citizens in recognition of their extra-ordinary contributions to the society at a glittering ceremony held at National College Grounds Bangalore. MP Rajeev Chandrashekar, Padmashri Anitha Reddy were present in the function.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X