ಕಾಂಗ್ರೆಸ್ಸೂ ತಂಡೋಪಾದಿಯಲ್ಲಿ ಬರ ಪ್ರದೇಶಗಳತ್ತ

ಬರ ಪ್ರವಾಸ: ಏ.10ರಿಂದ ಕಾಂಗ್ರೆಸ್ ಪಕ್ಷವು ಮೂರು ತಂಡಗಳಾಗಿ 10-12 ದಿನಗಳ ಕಾಲ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದೆ. ಪರಮೇಶ್ವರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕಿ ಮೋಟಮ್ಮ ಹಾಗೂ ತಾವು ಆ ತಂಡಗಳ ನೇತೃತ್ವ ವಹಿಸುತ್ತೇವೆ. ಅಧ್ಯಯನ ನಡೆಸಿ ಏ. 28ರಂದು ಸೋನಿಯಾ ಗಾಂಧಿ ಅವರಿಗೆ ವರದಿ ನೀಡುತ್ತೇವೆ. ಇದರಿಂದ ಬರ ನಿರ್ವಹಣೆಗೆ ರಾಜ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಸೃಷ್ಟಿಯಾಗಲಿದೆ ಎಂದು ಸಿದ್ರಾಮಣ್ಣ ತಿಳಿಸಿದರು.
ಬರದ ಬಗ್ಗೆ ಮುಖ್ಯಮಂತ್ರಿ ಈಗ ಎಚ್ಚೆತ್ತುಕೊಂಡಿದ್ದಾರೆ. ದುರಂತವೆಂದರೆ ಬಜೆಟ್‌ನಲ್ಲಿ ಬರ ನಿರ್ವಹಣೆಗೆ ಒಂದು ಪೈಸೆಯನ್ನೂ ಸರ್ಕಾರ ಎತ್ತಿಟ್ಟಿಲ್ಲ. ಕೇಂದ್ರ ನೀಡಿರುವ ಮೀಸಲು ನಿಧಿಯನ್ನೇ ರಾಜ್ಯ ಸರ್ಕಾರ ಇನ್ನೂ ಸರಿಯಾಗಿ ಬಳಸಿಕೊಂಡಿಲ್ಲ ಅವರು ಟೀಕಿಸಿದರು.
ಕಾಂಗ್ರೆಸ್‌ಗೆ ಬನ್ನಿ: ಇದೇ ವೇಳೆ, ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ 'ಕಾಂಗ್ರೆಸ್‌ಗೆ ಬನ್ನಿ, ಬದಲಾವಣೆ ತನ್ನಿ' ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ಹಿರಿಯ ನಾಯಕರು ಭಾಗವಸಲಿದ್ದಾರೆ. ಸುಮಾರು ಲಕ್ಷಕ್ಕೂ ಹೆಚ್ಚು ಜನ ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ ಎಂದು ಪರಮೇಶ್ವರ್ ಹೇಳಿದರು.












Click it and Unblock the Notifications