ಸೋನಿಯಾ ಮೇಡಂ ಬೆಂಗಳೂರಿಗೆ ಬರ್ತಾರಾ?

ಯಡಿಯೂರಪ್ಪ ಅವರ ಹಿಡಿದಲ್ಲಿರುವ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ, ಡಾ. ಶಿವಕುಮಾರ ಸ್ವಾಮಿಗಳಿಗೆ 105 ಗುರುವಂದನೆ ಸಲ್ಲಿಸುತ್ತಾ, ಲಿಂಗಾಯತ ಮತಗಳನ್ನು ಕೈವಶ ಮಾಡಿಕೊಳ್ಳುವ ಉದ್ದೇಶವೂ ಅವರಿಗಿದೆ.
ಅದೇ ವೇಳೆಗೆ ರಾಜ್ಯ ಕಾಂಗ್ರೆಸ್ ನ ಮೂರು ತಂಡಗಳೂ ಬರ ಪ್ರವಾಸದಿಂದ ವಾಪಸಾಗಿ, ವರದಿ ನೀಡಿರುತ್ತವೆ. ಆಗ ಸೋನಿಯಾ ಅವರು ಬೆಂಗಳೂರಿನಲ್ಲಿ ಪಕ್ಷಕ್ಕೆ ಸೂಕ್ತ ಮಾರ್ಗದರ್ಶನ ನೀಡುವ ಸಾಧ್ಯತೆಯಿದೆ.
ಆದರೆ ಮುಖ್ಯವಾಗಿ, ಇನ್ನೊಂದು ವರ್ಷದೊಳಗಾಗಿ ರಾಜ್ಯ ವಿಧಾನಸಭೆಗೆ ಅಕಾಲಿಕ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪಕ್ಷ ಸಂಘಟಿಸುವ ಬಗ್ಗೆ ಕಾರ್ಯಕ್ರಮ ಹಾಕಿಕೊಳ್ಳುವ ಮನಸ್ಸೂ ಇದೆ. ಒಟ್ಟಿನಲ್ಲಿ ಸೋನಿಯಾ ಕರ್ನಾಟಕಕ್ಕೆ ಬಂದು ವರ್ಷಗಳೇ ಆಗಿವೆ.
ಇನ್ನು ಚುನಾವಣೆ ಕಾಲೇ ಮೇಡಂ ಕರ್ನಾಟಕಕ್ಕೆ ಆಗಾಗ್ಗೆ ಭೇಟಿ ನೀಡುವ ಲಕ್ಷಣಗಳಿವೆ. ಬರ ಪ್ರವಾಸ ಮುಗಿಯುತ್ತಿದ್ದಂತೆ ಪಕ್ಷವನ್ನು ಸಂಘಟಿಸಲು ಜೂನ್ ತಿಂಗಳಿಂದ ಕಾಂಗ್ರೆಸ್ ನಾಯಕರು ರಾಜ್ಯಾದ್ಯಂತ ಸತತ ಪ್ರವಾಸಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ.












Click it and Unblock the Notifications