ಯುವತಿ ಅಪಹರಿಸಿದ 'ಸ್ವಯಂಕೃಷಿ'ಕ ವೀರೇಂದ್ರಬಾಬು

ಈಗಾಗಲೇ ಸೌಭಾಗ್ಯ ಮತ್ತು ಚಂದ್ರಿಕಾ ಎಂಬ ಇಬ್ಬರು ಹೆಣ್ಣುಮಕ್ಕಳೊಂದಿಗೆ ಮದುವೆಯಾಗಿರುವ ವೀರೇಂದ್ರಬಾಬು ಇನ್ನೂ ಒಂದಿರಲಿ ಎಂದು 23 ವರ್ಷದ ಪಾರ್ವತಿ ಎಂಬ ಯುವತಿಯನ್ನೂ ಅಪಹರಿಸಿಕೊಂಡು ಹೋಗಿದ್ದಾನೆ. ಈ ಬಗ್ಗೆ ಪಾರ್ವತಿಯ ಅಪ್ಪ-ಅಮ್ಮ ದೇವನಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.
ಯಲಹಂಕ ಸಮೀಪ ಖಾಸಗಿ ಕಂಪನಿಯಲ್ಲಿದ್ದ ಪಾರ್ವತಿ ಮಾರ್ಚ್ 30ರಿಂದ ಕಾಣೆಯಾಗಿದ್ದಾರೆ. ಅದಕ್ಕೂ ಮುನ್ನ ಒಂದು ವರ್ಷದಿಂದ ವೀರೇಂದ್ರಬಾಬು ಜತೆ ಇವರ ಸ್ನೇಹ ಕುದುರಿತ್ತು. ಪಾರ್ವತಿ, ದೇವನಹಳ್ಳಿಯಲ್ಲಿ ಹತ್ತಾರು ಹೆಸರುಗಳೊಂದಿಗೆ ಚಾಲ್ತಿಯಲ್ಲಿದ್ದ ಸ್ವಯಂಕೃಷಿ ಸಂಸ್ಥೆಯಲ್ಲಿ ಮೂರು ತಿಂಗಳ ಹಿಂದೆ ಕೆಲಸದಲ್ಲಿದ್ದರು.
ಮಾರ್ಚ್ 31ರಂದು ಸ್ವಯಂಕೃಷಿ ಸಂಸ್ಥೆಯ ಮಾಲೀಕ ವೀರೇಂದ್ರಬಾಬು ಅವರ (ಮೊದಲ) ಪತ್ನಿ ಚಂದ್ರಿಕಾ ಅವರು ನನಗೆ ಕರೆ ಮಾಡಿ ನಿಮ್ಮ ಮಗಳು ಪಾರ್ವತಿ ಮತ್ತು ನನ್ನ ಗಂಡ ಹೈದರಾಬಾದಿನಲ್ಲಿದ್ದಾರೆ. ನಿಮ್ಮ ಮಗಳ ನನ್ನ ಗಂಡನನ್ನು ಬಿಡದಿದ್ದರೆ ನಿಮ್ಮ ಮನೆ ಮುಂದೆ ಬಂದು ಗಲಾಟೆ ಮಾಡುತ್ತೇನೆ ಎಂದು ಹೇಳಿರುವುದಾಗಿ' ಪಾರ್ವತಿಯ ಅಪ್ಪ ಸದಾಶಿವ ಅವರು ದೂರಿನಲ್ಲಿ ತಿಳಿಸಿದ್ದಾರೆ. ಈ ಮಧ್ಯೆ, ಎಲ್ಲರಿಗೂ ಫೋನ್ ಮಾಡಿ ತಾನು ವೀರೇಂದ್ರ ಬಾಬು ಜತೆ 'ಸ್ವಯಂ'ಪ್ರೇರಣೆಯಿಂದ ಹೋಗಿರುವುದಾಗಿ ಪಾರ್ವತಿ ಅಲವತ್ತುಕೊಂಡಿದ್ದಾರೆ.












Click it and Unblock the Notifications