'ಶಂಕರ ಬಿದರಿ ನನ್ನ ಮಾಂಗಲ್ಯಕ್ಕೆ ಕೈಹಾಕಿದ್ದರು'
ಬೆಂಗಳೂರು,
ಏ.6: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡಿದ್ದ ಶಂಕರ ಮಹಾದೇವ ಬಿದರಿ ಅವರನ್ನು ಹಿಟ್ಲರ್, ಗಡಾಫಿ ಅಂತೆಲ್ಲ ಹೈಕೋರ್ಟ್ ಜರಿದಿತ್ತು. ಕೋರ್ಟ್ ಹಾಗೆ ಹೇಳುವಾಗ ಬಿದರಿ ಸಾಹೇಬರು ಕಾಡುಗಳ್ಳ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಸುವಾಗ ನಡೆಸಿದ್ದ ಕುಕೃತ್ಯಗಳ ಬಗ್ಗೆ ಮಾನವ ಹಕ್ಕುಗಳ ಆಯೋಗ ನೀಡಿದ್ದ ವರದಿಯನ್ನು ಉಲ್ಲೇಖಿಸಿತ್ತು. id="toptextpromo">ಈ
ಮಧ್ಯೆ, 'ಇದು (ಮುತ್ತುಲಕ್ಷ್ಮಿಯ ಆರೋಪಗಳು) ನನ್ನ ಹೆಸರಿಗೆ ಕಳಂಕ ತರುವ ಯತ್ನವಾಗಿದೆ. ಸೂಕ್ತ ಸಮಯದಲ್ಲಿ, ಸರಿಯಾಗಿ ಉತ್ತರ ನೀಡುವೆ' ಎಂದು ಶಂಕರ ಬಿದರಿ Public TVಗೆ
ತಿಳಿಸಿದ್ದಾರೆ.
id='are-slot-1'
class='oiad
oi-axt
oiadv'>
id='top-searched-articles'>
ಇದೀಗ
ತಾನೂ ಬಿದರಿ ಸಾಹೇಬರ ಕಾರ್ಯಾಚರಣೆಯ ಸಂತ್ರಸ್ತೆ ಎಂದು ಹೇಳಿಕೊಂಡು ಖುದ್ದು ವೀರಪ್ಪನ್ ನ ಹೆಂಡತಿಯ ಬಿದರಿ ಅವರ ಒಂದೊಂದೇ ಕುಕೃತ್ಯಗಳನ್ನು ನೆನಪಿಸಿಕೊಂಡು ಹೇಳಿದ್ದಾಳೆ. ಬೆಂಗಳೂರಿನಲ್ಲಿ ಮುತ್ತುಲಕ್ಷ್ಮಿ ಉದುರಿಸಿದ
'ಮುತ್ತುಗಳು'
ಹೀಗಿವೆ:
* ಬಿದರಿ ನನ್ನ ಮಾಂಗಲ್ಯಕ್ಕೆ ಕೈಹಾಕಿ, ಅದನ್ನು ಕಿತ್ತುಕೊಳ್ಳಲು ಯತ್ನಿಸಿದರು
* STF ಕ್ರೌರ್ಯ ಅಮಾನವೀಯವಾಗಿತ್ತು
* ನನ್ನ ಜತೆಗಿದ್ದ 15 ಮಂದಿಗೆ ಬಟ್ಟೆ ಬಿಚ್ಚಿ, ಕರೆಂಟ್ ಶಾಕ್ ಕೊಟ್ಟಿದ್ದರು
* ಕೆಳ ಹಂತದ ನಾಲ್ಕು ಅಧಿಕಾರಿಗಳು ಅತ್ಯಾಚಾರಿಗಳು
* ಆದಿವಾಸಿ ಮಹಿಳೆಯರ ಮೇಲೆ ಅತ್ಯಾಚಾರ
* ಮೋಹನದಾಸ್ ಎಂಬ ಅಧಿಕಾರಿಯಂತೂ ಹೆಣ್ಣು-ಗಂಡು ಭೇದವಿಲ್ಲದೆ ಪೈಶಾಚಿಕ ಕೃತ್ಯ ಎಸಗುತ್ತಿದ್ದ
* ಇತರೆ ಅಧಿಕಾರಿಗಳಾದ ಬಾವಾ, ಅಶೋಕ್ ಕುಮಾರ್ ಸಹ ಕ್ರೌರ್ಯ ಮೆರೆದಿದ್ದರು.












Click it and Unblock the Notifications