ಮಲ್ಯ ಸಾಹೇಬರ ಅನಿಷ್ಠಕ್ಕೆ ಅಷ್ಟಮಂಗಲ ಪರಿಹಾರ!

ಇದಕ್ಕಾಗಿ ಕೆಲ ದಿನಗಳ ಹಿಂದೆ ಕೇರಳದ ಪರಪ್ಪನಂಗಡಿಯಲ್ಲಿರುವ ಖ್ಯಾತ ಜ್ಯೋತಿಷಿ ಉನ್ನಿಕೃಷ್ಣನ್ ಪಣಿಕ್ಕರ್ ಅವರನ್ನು ಭೇಟಿ ಮಾಡಿಬರಲು ಮಲ್ಯ ತಮ್ಮ ಆಪ್ತರೊಬ್ಬರನ್ನು ಕಳುಹಿಸಿದ್ದರಂತೆ. ಈ ಮಾತುಕತೆಯ ಅನ್ವಯ ಪಣಿಕ್ಕರ್ ಅವರನ್ನೊಳಗೊಂಡ 5 ಅರ್ಚಕರ ತಂಡ ಮಂಗಳವಾರ ಮಧ್ಯಾಹ್ನ ಮುಂಬೈನಲ್ಲಿರುವ ಮಲ್ಯ ಅವರ ನಿವಾಸ ನೀಲಾದ್ರಿಗೆ ಆಗಮಿಸಿತ್ತು.
ಅಲ್ಲಿ ಬುಧವಾರ ಮುಂಜಾನೆ 4 ಗಂಟೆಗೆ ವಿವಿಧ ಪೂಜೆಗಳು ನಡೆದು, ಅಲ್ಲಿ ಮಲ್ಯ ತಮ್ಮ ಸಮಸ್ಯೆಗೆ ಅಷ್ಟಮಂಗಲ ಪ್ರಶ್ನೆಯ ಮೂಲಕ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದ್ದಾರೆ. ಅತ್ಯಂತ ಸಾಂಪ್ರದಾಯಿಕವಾಗಿ ನಡೆದ ಈ ಪೂಜಾವಿಧಿಯ ವೇಳೆ ವಿಜಯ್ ಮಲ್ಯ, ಅವರ ಪುತ್ರ ಸಿದ್ಧಾರ್ಥ ಮಲ್ಯ ಪಂಚೆ ಮತ್ತು ಶಲ್ಯದೊಂದಿಗೆ ಶಾಸ್ತ್ರೋಕ್ರವಾಗಿ ಜೂಜೆ ನೆರವೇರಿಸಿದರು ಎಂದು ಮೂಲಗಳು ತಿಳಿಸಿವೆ.
ಅಂದಹಾಗೆ ಮಲ್ಯರ ಮನೆಯಲ್ಲಿ ಅಷ್ಟಮಂಗಲ ನೆರವೇರಿಸಿದ ಕೇರಳ ಮೂಲದ ಪಣಿಕ್ಕರ್ ತಮಿಳುನಾಡು ಸಿಎಂ ಜಯಲಲಿತಾ, ಶ್ರೀಲಂಕಾದ ಮಾಜಿ ಅಧ್ಯಕ್ಷೆ ಚಂದ್ರಿಕಾ ಕುಮಾರತುಂಗಾ, ಲಂಕಾದ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರಿಗೂ ಖಾಸಗಿ ಜ್ಯೋತಿಷಿ.












Click it and Unblock the Notifications