ಕಿಂಗ್ ಮಲ್ಯ ಅಷ್ಟಮಂಗಲಕ್ಕೆ ಮೊರೆ ಹೋಗಿದ್ದೇಕೆ?

ಒಟ್ಟಿನಲ್ಲಿ, ಧರಾಶಾಯಿಯಾಗಿರುವ ಕಿಂಗ್‌ಫಿಶರ್ ಏರ್‌ಲೈನ್ಸ್ ಕೊಟ್ಟ ಕಿಕ್ ಸಾಹೇಬರನ್ನು ಸೀದಾ ದೇವರ ಮುಂದೆ ಮಂಡಿಯೂರುವಂತೆ ಮಾಡಿದೆ. ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಬೇಡಿ ಸಂಸ್ಥೆಯ ಒಡೆಯ ವಿಜಯ್‌ಮಲ್ಯ ದೇವರ ಮೊರೆ ಹೋಗಿದ್ದಾರೆ. ತಮ್ಮ ಒಡೆತನದ ಕಿಂಗ್ ಫಿಶರ್ ಅಧೋಗತಿ ತಲುಪಿದ ಹಿನ್ನೆಲೆಯಲ್ಲಿ ಮುಂದೇನು ಎಂಬುದರ ಬಗ್ಗೆ ಮಲ್ಯ ಸಾಹೇಬರು ಅಷ್ಟಮಂಗಲ ಪ್ರಶ್ನೆ ಕೇಳಿದ್ದಾರೆ.
ಮುಂಬೈನಲ್ಲಿರುವ ತಮ್ಮ ಐಷಾರಾಮಿ ಬಂಗಲೆಯಲ್ಲೇ ಅಷ್ಟಮಂಗಲ ವಿಧಿವಿಧನಗಳನ್ನು ಪೂರೈಸಿದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರ ಸಿಕ್ತಾ, ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ಸಿಕ್ತಾ? ಮಲ್ಯ ಸಾಹೇಬರು ಮಂದೇನು ಮಾಡ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕಿಂಗ್‌ಫಿಶರ್ ಏರ್‌ಲೈನ್ಸ್ ಸಂಬಳಕ್ಕೂ ತತ್ವಾರ ಬಂದಿದ್ದು, ನೌಕರರು ಮಲ್ಯರನ್ನು ನಂಬಿ ದಿಕ್ಕೆಟ್ಟಿದ್ದಾರೆ.
ಈ ಮಧ್ಯೆ, ಸೀನಿಯರ್ ಮಲ್ಯರ ಸೊಸೆ ಎಂದೇ ಜನಪ್ರಿಯವಾಗಿರುವ ಬಾಲಿವುಡ್ ಬೆಡಗಿ, ಮತ್ತೊಬ್ಬ ಕನ್ನಡತಿ ದೀಪಿಕಾ ಪಡುಕೋಣೆ ಅವರು ಕಿರಿ ಮಲ್ಯ ಜತೆ ಅಷ್ಟಮಂಗಲದಲ್ಲಿ ಪಾಲ್ಗೊಂಡಿದ್ದರಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ.












Click it and Unblock the Notifications