ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಳೆ ಲಾಹೋರಿನಲ್ಲೇ ಇರುವೆ; ಒಬಾಮಾ ಬಂಧಿಸಲಿ

By Srinath
|
Google Oneindia Kannada News

am-in-lahore-us-can-arrest-me-let-chief-hafiz-saeed
ರಾವಳಪಿಂಡಿ, ಏ.3: ತನ್ನ 50 ಕೋಟಿ ರುಪಾಯಿ ಬಹುಮಾನ ನಿಗದಿಪಡಿಸಿರುವುದಕ್ಕೆ ಅಮೆರಿಕ ಅಧ್ಯಕ್ಷ ಒಬಾಮಾ ವಿರುದ್ಧ ಮುಂಬೈ ಸ್ಫೋಟದ ರೂವಾರಿ ಲಷ್ಕರೆ ತಯ್ಯಬಾ ಸಂಘಟನೆಯ ಉಗ್ರ ಹಫೀಜಾ ಸಯೀದ್ ಕೆರಳಿ ಕೆಂಡವಾಗಿದ್ದಾನೆ. ಪ್ರಸ್ತುತ ಪಾಕಿಸ್ತಾನದಲ್ಲಿ ಸ್ವಚ್ಚಂದ ಹಕ್ಕಿಯಾಗಿ ಓಡಾಡಿಕೊಂಡಿರುವ ಉಗ್ರ ಹಫೀಜಾ ಒಬಾಮಾ ಪಂಥಾಹ್ವಾನ ನೀಡಿದ್ದಾನೆ.

'ನಾಳೆ (ಏಪ್ರಿಲ್ 6) ಲಾಹೋರಿನಲ್ಲೇ ಇರುತ್ತೇನೆ. ಸಾಧ್ಯವಾದರೆ ನನ್ನನ್ನು ಬಂಧಿಸಿ' ಎಂದು ಸವಾಲು ಹಾಕಿದ್ದಾನೆ. ಇದನ್ನು ಬೆಂಬಲಿಸಿ, ಪಾಕಿಸ್ತಾನವೂ ಅಮೆರಿಕ ನಿರ್ಧಾರವನ್ನು ಪ್ರಶ್ನಿಸಿದೆ. 'ಹಫೀಜಾನನ್ನು ಶಿಕ್ಷೆಗೆ ಗುರಿಪಡಿಸಬೇಕು ಅಂದರೆ ಕಾನೂನು ಒಪ್ಪತಕ್ಕಂತಹ ಸಾಕ್ಷ್ಯಗಳು ಬೇಕು. ಮೊದಲು ಅದನ್ನು ಒದಗಿಸಿ' ಎಂದು ಒಬಾಮಾಗೆ ತಾಕೀತು ಮಾಡಿದೆ.

ಉಗ್ರ ಹಫೀಜಾ ಹೀಗೆ ಪಂಥಾಹ್ವಾನ ನೀಡಿರುವುದು ಎಲ್ಲೋ ಭೂಗತನಾಗಿ ಅಲ್ಲ. ಪಾಕ್ ಮಿಲಿಟರಿ ಕೇಂದ್ರ ಕಚೇರಿಯಿಂದ ಕೂಗಳತೆ ದೂರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಇಂತಹ ಸವಾಲು ಹಾಕಿದ್ದಾನೆ. 'ನಾನು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಅಮೆರಿಕ ಯಾವಾಗ ಬೇಕಾದರೂ ನನ್ನನ್ನು ಸಂಪರ್ಕಿಸಿ, ನನ್ನ ತಲೆಗೆ ಇಟ್ಟಿರುವ 50 ಕೋಟಿ ರು. ಬಹುಮಾನವನ್ನು ನನಗೇ ನೀಡಬಹುದು' ಎಂದಿದ್ದಾನೆ.

FBI ಭಯೋತ್ಪಾದಕರ ಪಟ್ಟಿಯಲ್ಲಿ LeT ಉಗ್ರ ಹಫೀಜಾ ಹೆಸರು ದಾಖಲಾಗಿದ್ದು, ಅವನ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಹಫೀಜಾನ ಸಂಬಂಧಿ ಅಬ್ದುಲ್ ರಹಮಾನ್ ಮಕ್ಕಿ ತಲೆಯ ಮೇಲೂ 3 ದಶಲಕ್ಷ ಡಾಲರ್ ಬಹುಮಾನ ಇದೆ ಎಂದು ಅಮೆರಿಕ ಹೇಳಿದೆ.

62 ವರ್ಷದ ಉಗ್ರ ಹಫೀಜಾ ಕಣ್ಣೆದುರಿಗೇ ಇರುವಾಗ ಏನು ಮಾಡುತ್ತದೋ ಕಾದು ನೊಡಬೇಕು. ಒಂದು ವೇಳೆ ಅಮೆರಿಕ ತನ್ನ ಯತ್ನದಲ್ಲಿ ವಿಫಲವಾದರೆ ಅಂತಾರಾಷ್ಟ್ರೀಯ ಸ್ತರದಲ್ಲಿ ಅಮೆರಿಕಕ್ಕೆ ತೀವ್ರ ಮುಖಭಂಗವಾಗುವುದು ನಿಚ್ಚಳ. ಜತೆಜತೆಗೆ ಭಯೋತ್ಫಾದನೆ ವಿರುದ್ಧದ ಹೋರಾಟಕ್ಕೆ ಹಿನ್ನಡೆಯಾಗುವುದೂ ನಿಶ್ಚಿತ.

English summary
I am here, I am visible. America should give that reward money to me - LeT chief Hafiz Mohammad Saeed challenges US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X