ಯಡ್ಡಿ ಪಾಕಿಸ್ತಾನ ನೆನಪಿಸಿಕೊಳ್ಳಲಿಲ್ಲ ಯಾಕೆ?

ಸುದ್ದಿಗೋಷ್ಠಿಯಲ್ಲಿ ಯಾಕೋ ಯಡಿಯೂರಪ್ಪ ಅವರಿಗೆ ಪಾಕಿಸ್ತಾನ ನೆನಪಾಗಲಿಲ್ಲ. ಯಡಿಯೂರಪ್ಪಗೂ ಪಾಕಿಸ್ತಾನಕ್ಕೂ ಏನು ಸಂಬಂಧ? ಎಂದು ತಲೆ ಕೆಡಿಸಿಕೊಳ್ಳಬೇಡಿ.
ಇತ್ತೀಚೆಗೆ ಸಿದ್ದಗಂಗಾ ಮಠದಲ್ಲಿ ತಂಪು ಮಜ್ಜಿಗೆ ಕುಡಿದು ಗುರಗಳ ಆಶೀರ್ವಾದ ಪಡೆದು ಬಂದ ಯಡಿಯೂರಪ್ಪ ಅವರು ನಾನಿನ್ನು ಮೌನಿ ಎಂದಿದ್ದರು.
ಕೆಲ ಕ್ಷಣಗಳ ನಂತರ ಬಿಜೆಪಿ ಹೈಕಮಾಂಡ್ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ಅನ್ಯಾಯ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದರು. ನನಗಾದಷ್ಟು ಅನ್ಯಾಯ ಯಾವ ನಾಯಕರಿಗೂ ಆಗಿಲ್ಲ. ಪಾಕಿಸ್ತಾನದಂಥ ದೇಶದಲ್ಲೂ ಈ ರೀತಿ ಅನ್ಯಾಯವಾಗುವುದಿಲ್ಲ, ಅದಕ್ಕಿಂತ ಕೆಟ್ಟದಾಗಿ ನನ್ನನ್ನು ಕಾಣಲಾಗುತ್ತಿದೆ ಎಂದು ಹೇಳಿದ್ದರು.
ರಾಜ್ಯ ಪ್ರವಾಸ ಮಾಡುತ್ತೇನೆ. 10 ಲಕ್ಷ ಜನ ಸೇರಿಸಿ ಬೃಹತ್ ಸಮಾವೇಶ ಆಯೋಜಿಸುತ್ತೇನೆ ಎಂದು ಮತ್ತೆ ಮತ್ತೆ ಅದೇ ಡೈಲಾಗ್ ಹೇಳಿದ ಯಡಿಯೂರಪ್ಪ ಅವರಿಗೆ ಯಾಕೋ ಹಾಡಿದ್ದು ಹಾಡೋ ಕಿಸ್ಬಾಯಿ ದಾಸ ಅಂದ್ರೆ ಇಷ್ಟ ಆಗಿರೋಹಾಂಗೆ ಕಾಣ್ತದೆ.












Click it and Unblock the Notifications