ಜೈಲುಹಕ್ಕಿ ಜನಾ ರೆಡ್ಡಿ ನಿವೃತ್ತಿ, ಮುಂದೇನು?

janardhan-reddy-to-retire-as-mlc-in-june
ಬೆಂಗಳೂರು, ಏ.3: ಜೈಲಿನಲ್ಲಿರುವ ಮೇಲ್ಮನೆಯ ಸದಸ್ಯ ಜನಾರ್ದನ ರೆಡ್ಡಿ ವಿಧಾನಮಂಡಲದ ಕಲಾಪದಲ್ಲಿ ಪಾಲ್ಗೊಳ್ಳೋದು ಬೇಡ್ವಾ? ಎಂಬುದಕ್ಕೆ ಜೂನ್ ತಿಂಗಳಲ್ಲಿ ರೆಡ್ಡಿ ಅವರ ಸದಸ್ಯತ್ವ ಅವಧಿಯೇ (MLC) ಕೊನೆಗೊಳ್ಳುತ್ತಿರುವಾಗ ಇನ್ನು ಅವರು ಅಧಿವೇಶನಕ್ಕೆ ಬಂದು ಮಾಡೋದೇನಿದೆ? ಎಂಬಂತ ಉತ್ತರ ಸಿಕ್ಕಿದೆ. ಈ ಮಧ್ಯೆ, ರೆಡ್ಡಿ ನ್ಯಾಯಾಂಗ ಬಂಧನ ಅವಧಿಯನ್ನು ಏ. 7ರವರೆಗೆ ವಿಸ್ತರಿಸಲಾಗಿದೆ.

ಹಾಗೆ ನೋಡಿದರೆ ಮೇಲ್ಮನೆಯ ಒಟ್ಟು 75 ಸದಸ್ಯರ ಪೈಕಿ 20 ಸದಸ್ಯರ ಅವಧಿ ಮೇ-ಜೂನ್‌ನಲ್ಲಿ ಮುಕ್ತಾಯವಾಗಲಿದೆ. ಕೆಳಮನೆ ಸದಸ್ಯರು ಅಭ್ಯರ್ಥಿಗಳನ್ನು ಆರಿಸಿ, ಮೇಲ್ಮನೆಗೆ ಕಳಿಸುತ್ತಾರೆ. ಅಭ್ಯರ್ಥಿಗಳು ತಲಾ 18 ಮತ ಪಡೆಯಲೇಬೇಕು. ಪದವೀಧರ-ಶಿಕ್ಷಕ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಮತದಾರರಿಂದ ನೇರ ಆಯ್ಕೆಯಾಗುತ್ತದೆ. ಉನ್ನತ ಶಿಕ್ಷಣ ಸಚಿವರಾಗಿದ್ದ ವಿ.ಎಸ್. ಆಚಾರ್ಯರ ಅವಧಿ 2014ರವರೆಗೆ ಇತ್ತು. ಅಕಾಲಿಕ ನಿಧನದಿಂದಾಗಿ ಆ ಸ್ಥಾನಕ್ಕೂ ಚುನಾವಣೆ ನಡೆಯಬೇಕಾಗಿದೆ.

ಬಿಜೆಪಿ ಸಭಾಧ್ಯಕ್ಷರು ಸೇರಿ 120 ಸದಸ್ಯರು: ಸಾಧ್ಯತೆ 6 ಸದಸ್ಯರನ್ನು ಗೆಲ್ಲಿಸಿಕೊಳ್ಳಬಹುದು. ಈಗಿರುವುದು 4 ಸ್ಥಾನ.

ಕಾಂಗ್ರೆಸ್ 71 ಸದಸ್ಯರು: 3 ಸದಸ್ಯರನ್ನು ಗೆಲ್ಲಿಸಿಕೊಳ್ಳಬಹುದು. ಈಗಿರುವುದು 4 ಸ್ಥಾನ

ಜೆಡಿಎಸ್ 26 ಸದಸ್ಯರು: ಈಗಿರುವುದು 3 ಸ್ಥಾನ; 2 ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ.

ಏಳು ಪಕ್ಷೇತರ ಶಾಸಕರು: ಕಾಂಗ್ರೆಸ್ ಅಥವಾ ಬಿಜೆಪಿ ಹೆಚ್ಚುವರಿಯಾಗಿ ಒಂದು ಸ್ಥಾನ ಪಡೆದುಕೊಳ್ಳಬಹುದು.

ನಾಮ ನಿರ್ದೇಶನ: ಹಾಲಿ 3ರ ಅವಧಿ ಮೇ 20ಕ್ಕೆ ಕೊನೆ. ಇಲ್ಲೂ ಜೆಡಿಎಸ್ 1 ಸ್ಥಾನ ಕಳೆದುಕೊಳ್ಳುವುದು ಅನಿವಾರ್ಯ. ಬಿಜೆಪಿ 3 ಸ್ಥಾನ ದಕ್ಕಿಸಿಕೊಳ್ಳಬಹುದು.

ಪದವೀಧರ-ಶಿಕ್ಷಕ: ಮತದಾರರಿಂದ ನೇರ ಆಯ್ಕೆ- ಹಾಲಿ 3ರ ಅವಧಿ ಜೂ. 21ಕ್ಕೆ ಅಂತ್ಯ. ಈ ಮೂವರನ್ನೂ ಬಿಜೆಪಿಯೇ ಮುಂದುವರಿಸಬಹುದು.

ಶಿಕ್ಷಕರ ಕ್ಷೇತ್ರ: ಮತದಾರರಿಂದ ನೇರ ಆಯ್ಕೆ - ಬಿಜೆಪಿಯ ಗಣೇಶ್ ಕಾರ್ನಿಕ್, ಪಕ್ಷೇತರರಾಗಿ ಗೆದ್ದು ಬಿಜೆಪಿ ಸೇರಿರುವ ವೈ.ಎ. ನಾರಾಯಣಸ್ವಾಮಿ, ಪಕ್ಷೇತರ ಸದಸ್ಯ ಮರಿತಿಬ್ಬೇಗೌಡರ ಅವಧಿ ಜೂನ್ 21ಕ್ಕೆ ಕೊನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+