ಬಿಎಸ್ ಯಡಿಯೂರಪ್ಪ ಸುದ್ದಿಗೋಷ್ಠಿಯ ಮುಖ್ಯಾಂಶ

ಆದರೆ, ಯಾವುದೇ earth shaking ಹೇಳಿಕೆಗಳಾಲಿ, ವಿವಾದಾತ್ಮಕ ವಿಷಯಗಳಾಗಲಿ horse mouth ನಿಂದ ಹೊರಬೀಳಲಿಲ್ಲ. ಅಷ್ಟರ ಮಟ್ಟಿಗೆ ಅವರ ಸುದ್ದಿಗೋಷ್ಠಿ ನೀರಸವಾಗಿತ್ತು. ಯುದ್ಧದಲ್ಲಿ ಶಸ್ತ್ರತ್ಯಾಗ ಮಾಡಿದ ಸೇನಾನಿಯಂತೆ ಮಾತನಾಡಿದರು ಯಡಿಯೂರಪ್ಪ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಮಂಗಳವಾರ ಮಧ್ಯಾನ್ಹ ಬಿಎಸ್ ವೈ ನಡೆಸಿದ ಸುದ್ದಿಗೋಷ್ಠಿಯ ಮುಖ್ಯಾಂಶ:
* ಇನ್ನು ಮುಂದೆ ಮೌನವಾಗಿರುವುದಿಲ್ಲ; ಇವತ್ತಿನಿಂದಲೇ ರಾಜ್ಯ ಪ್ರವಾಸ ಮಾಡುವೆ. ಇಂದು ರಾತ್ರಿ ಹೊಸಪೇಟೆಯಲ್ಲಿ ವಾಸ್ತವ್ಯ
* 1 ಲಕ್ಷ ಕೋಟಿ ರು. ಮೊತ್ತದ ಬಜೆಟ್ ಮಂಡಿಸುವ ಮಹತ್ವಾಕಾಂಕ್ಷೆಯಿತ್ತು. ಅದದರದೇ ಕಾರಣಣಗಳಿಂದಾಗಿ ಮಂಡಿಸುವ ಅವಕಾಶ ಕೈತಪ್ಪಿತು.
* ಜಿಲ್ಲಾ ಅಧಿಕಾರಿಗಳು ನಿದ್ದೆ ಮಾಡ್ತಿದ್ದಾರೆ. ಅಧಿವೇಶನ ಮುಗಿದರೂ, ಅತ್ತ ಜಿಲ್ಲೆಗಳಲ್ಲಿ ಜನ ಬರಗಾಲದಿಂದ ಕಂಗಾಲಾಗಿದ್ದರೂ ಇನ್ನೂ ರಾಜಧಾನಿಯಲ್ಲೇ ಠಿಕಾಣಿ ಹೂಡಿದ್ದಾರೆ.
* ಸೂಕ್ತ ಸ್ಥಾನಮಾನ ವಿಚಾರ; ಹೈಕಮಾಂಡಿನಿಂದ ಸೂಕ್ತ ನಿರ್ಧಾರದ ವಿಶ್ವಾಸ
* ಬಿಜಾಪುರದಲ್ಲಿ ಬರ ಪರಿಹಾರಕ್ಕೆ 5 ಕೋಟಿ ರೂ ನೀಡಲು ಸಿಎಂಗೆ ಮನವಿ
* ಸಮಸ್ಯೆ ಬಗ್ಗೆ ಸಿಎಂಗೆ ವರದಿ ಸಲ್ಲಿಸುವೆ
* ಗೌರವಾನ್ವಿತ ಸಿಎಂ ಬಗ್ಗೆ ಮಾತನಾಡೊಲ್ಲ.












Click it and Unblock the Notifications