ತಿಮ್ಮಪ್ಪನ ಹೆಸರಲ್ಲಿ 100 ಕೆಜಿ ಚಿನ್ನ ಗುಳುಂ?

'ಆನಂದ ನಿಲಯಂ ಅನಂತ ಸ್ವರ್ಣಮಯಂ' ಎಂಬ ಯೋಜನೆ ಅವ್ಯವಹಾರಮಯವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಈ ಯೋಜನೆಗಾಗಿ ಚಿನ್ನದ ಲೇಪನದ ಹೆಸರಿನಲ್ಲಿ ಚಿನ್ನ ನೀಡಿದ ಭಕ್ತಾದಿಗಳಲ್ಲಿ ಅನೇಕರು ಬೋಗಸ್ ಭಕ್ತರಿದ್ದಾರೆ ಎಂದು ತಿಳಿದುಬಂದಿದೆ.
ಈ ಯೋಜನೆಗೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು. ನಂತರ ಟಿಟಿಡಿ ತನ್ನ ಭಕ್ತಾದಿಗಳಿಗೆ ಪತ್ರ ಬರೆದು ದಾನವಾಗಿ ನೀಡಿದ ಚಿನ್ನವನ್ನು ಹಿಂಪಡೆಯುವಿರೋ ಅಥವಾ ಬೇರೆ ಯೋಜನೆಗೆ ಬಳಿಸಿಕೊಳ್ಳಲು ಅನುಮತಿ ನೀಡುವಿರೋ ಎಂದು ಕೇಳಲಾಗಿತ್ತು.
ಆದರೆ, ಅನೇಕ ಪತ್ರಗಳು ಟಿಟಿಡಿ ಕಚೇರಿಗೆ ವಾಪಾಸ್ ಬಂದಿದೆ. ಭಕ್ತಾದಿಗಳ ವಿಳಾಸ ನಕಲಿ ಎಂದು ದೃಢಪಟ್ಟಿದೆ.
ಬೋಗಸ್ ದಾನಿಗಳು ನೀಡಿದ ಚಿನ್ನದ 100ಕೆಜಿಗೂ ಅಧಿಕವಾಗಿದ್ದು, ಸದ್ಯಕ್ಕೆ ಸುಭದ್ರವಾದ ಕೋಶಾಗಾರದಲ್ಲಿ ಇರಿಸಲಾಗಿದೆ.
ಸುಬ್ರಮಣ್ಯಂ ಸ್ವಾಮಿ ಅರ್ಜಿ: ಟಿಟಿಡಿಯ ಮಹತ್ವದ ಯೋಜನೆಗೆ ಅಡ್ಡಗಾಲು ಹಾಕಿದ್ದು ಜನತಾಪಾರ್ಟಿಯ ಸುಬ್ರಮಣ್ಯ ಸ್ವಾಮಿ. ಟಿಟಿಡಿ ಮಾಜಿ ಮುಖ್ಯಸ್ಥ ಡಿಕೆ ಆದಿಕೇಶವಲು ನಾಯ್ಡು ಅವರು ರೂಪಿಸಿದ ಈ ಯೋಜನೆಯಲ್ಲಿ ಅನೇಕ ಅವ್ಯವಹಾರ ನಡೆದಿದೆ ಎಂದು ಸ್ವಾಮಿ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದರು.
ದೇಗುಲಕ್ಕೆ ಚಿನ್ನದ ತಗಡು ಬಡಿಯುವ ಕಾರ್ಯದಿಂದ ದೇಗುಲಕ್ಕೆ ಹಾನಿ ಉಂಟಾಗುತ್ತೆ ಎಂದು ಪ್ರಾಚ್ಯ ವಸ್ತು ಇಲಾಖೆ ಕೂಡಾ ವಾದ ಮಂಡಿಸಿತ್ತು. ಆಂಧ್ರ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಈ ಯೋಜನೆಗೆ ತಡೆಯಾಜ್ಞೆ ನೀಡಿದೆ.












Click it and Unblock the Notifications