ಮುತ್ತೂಟ್ ಫೈನಾನ್ಸ್ ಠೇವಣಿಗೂ ಬಿತ್ತು ನಿಷೇಧ

ಇದೂ ಕೇರಳ ಮೂಲದ್ದೇ ಆದ ಮುತ್ತೂಟ್ ಫಿನ್‌ಕಾರ್ಪ್ ಕಂಪನಿಗೆ ಸಾರ್ವಜನಿಕರಿಂದ ಯಾವುದೇ ಸ್ವರೂಪದಲ್ಲಿ ಠೇವಣಿ ಸಂಗ್ರಹಿಸಬಾರದು ಎಂದು ಆರ್‌ಬಿಐ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಕಂಪನಿಯು ಬ್ಯಾಂಕೇತರ ಹಣಕಾಸು (ಎನ್‌ಬಿಎಫ್‌ಸಿ) ಸಂಸ್ಥೆಯಾಗಿದ್ದು, ಮುತ್ತೂಟ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್‌ನ ಪ್ರವರ್ತಕ ಸಂಸ್ಥೆಯೂ ಆಗಿದೆ.
ಈ ಸಂಸ್ಥೆಯು ಸಾರ್ವಜನಿಕರಿಂದ ಠೇವಣಿ ಸಂಗ್ರಹಿಸುವುದನ್ನು ಸಂಪೂರ್ಣವಾಗಿ ನೀಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿ ಠೇವಣಿ ಸಂಗ್ರಹಿಸಿದರೆ ಅದು ಶಿಕ್ಷಾರ್ಹ ಅಪರಾಧ ಎಂದೂ ಆರ್‌ಬಿಐ ಪ್ರಕಟಣೆ ತಿಳಿಸಿದೆ. ಈ ಕುರಿತು ಸಾರ್ವಜನಿಕರಿಗೂ ಎಚ್ಚರಿಕೆ ನೀಡಲಾಗಿದೆ.
ಕಳೆದ ಫೆಬ್ರವರಿಯಲ್ಲಿ ಆರ್‌ಬಿಐ ಕಿವಿ ಹಿಂಡಿದ್ದೇ ತಡ ಮಣಪ್ಪುರಂ ಫೈನಾನ್ಸ್ ಕಂಪನಿಯು 'ಇಲ್ಲ ಇಲ್ಲ ನಮ್ಮಲ್ಲಿ ಯಾರೂ ಠೇವಣಿ ಇಡ್ತಾನೂ ಇಲ್ಲ. ಇಡಲೂ ಬೇಡಿ' ಎಂದು ಅಲವತ್ತುಕೊಂಡಿತು. 2011ರ ಮಾರ್ಚ್ ತಿಂಗಳಿನಿಂದಲೇ ಸಾರ್ವಜನಿಕರಿಂದ ಠೇವಣಿ ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ' ಎಂದು ಸ್ಪಷ್ಟಪಡಿಸಿತ್ತು.












Click it and Unblock the Notifications