ಸಕಾಲ ಲಾಂಛನ ಸೃಷ್ಟಿಕರ್ತ ಮೈಸೂರು ಬಾಲಸ್ವಾಮಿ

ಸಮಯ ಮತ್ತು ಕಾನೂನಿನ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸಿದ ಲಾಂಛನ ಇದಾಗಿದೆ. ಈ ಲಾಂಛನ ವಿನ್ಯಾಸಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿ ಸದಾನಂದಗೌಡರವರು 50 ಸಾವಿರ ರೂಪಾಯಿಯನ್ನು ಬಹುಮಾನವಾಗಿ ನೀಡಿ ಬಾಲಸ್ವಾಮಿಯನ್ನು ಗೌರವಿಸಿದ್ದಾರೆ.
ಮೈಸೂರಿನ ಸೆಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಬಳಿಕ ಕಾವಾದಲ್ಲಿ ತರಬೇತಿ ಪಡೆದ ಬಾಲಸ್ವಾಮಿಯವರು, ಬಿಎಫ್ಎನಲ್ಲಿ ಅಪ್ಲೈಡ್ ಆರ್ಟ್ಸ್ ಐಚ್ಚಿಕ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಆ ಬಳಿಕ ಬೆಂಗಳೂರಿನಲ್ಲಿ ವಿವಿಧ ಜಾಹೀರಾತು ಏಜೆನ್ಸಿಯಲ್ಲಿ ಕೆಲಸ ಮಾಡಿದ್ದರು.
ನಂತರ ಮೈಸೂರಿಗೆ ಹಿಂತಿರುಗಿದ ಅವರು ಶಿಲ್ಪಕೃತಿ ಐಚ್ಚಿಕ ವಿಷಯದಲ್ಲಿ ಫೈನ್ ಆರ್ಟ್ಸ್ ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ವಿಶ್ವವಿದ್ಯಾನಿಲಯಗಳ ಅನುದಾನ ಆಯೋಗಕ್ಕೆ ಲಾಂಛನ ವಿನ್ಯಾಸ ಮಾಡಿದ ಐವರ ಪೈಕಿ ಇವರೂ ಒಬ್ಬರಾಗಿದ್ದಾರೆ. ಬಾಲಸ್ವಾಮಿ ಸಂಪರ್ಕ: 99003 00038. [ಸಕಾಲ ಎಂದರೇನು, ಬಳಕೆ ಹೇಗೆ?]












Click it and Unblock the Notifications