ಬೇಲ್ ನೀಡಲು ಸುಪ್ರೀಂ ನಕಾರ, ಮತ್ತೆ ಕಣ್ಣೀರಿಟ್ಟ ಶ್ರೀಲಕ್ಷ್ಮಿ

ನ್ಯಾ. ಎಚ್ ಎಲ್ ದತ್ತು ಮತ್ತು ಸಿಕೆ ಪ್ರಸಾದ್ ಮತ್ತು ಸಿಕೆ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಮುಂದೆ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಆದರೆ, ಜಾಮೀನು ಅರ್ಜಿ ಕೋರಿ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಮನವಿ ಮಾಡಬಹುದು ಎಂದು ಸೂಚಿಸಿದೆ.
ಜಾಮೀನು ನಿರಾಕರಣೆ ಏಕೆ?: ಸಿಬಿಐ ಈಗಾಗಲೆ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಹಂತದಲ್ಲಿ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ನ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿದೆ.
ಸಿಬಿಐ ನ್ಯಾಯಾಲಯ, ಆಂಧ್ರ ಹೈಕೋರ್ಟ್ ನಲ್ಲಿ ಶ್ರೀಲಕ್ಷ್ಮಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಲ್ಪಟ್ಟ ನಂತರ ಸುಪ್ರೀಂಕೋರ್ಟ್ ನಲ್ಲೂ ಲಕ್ಷ್ಮಿಗೆ ಹಿನ್ನೆಡೆಯಾದ ಹಿನ್ನೆಲೆಯಲ್ಲಿ ಶ್ರೀಲಕ್ಷ್ಮಿ ಅವರು ಮತ್ತೆ ಕಣ್ಣೀರಿಗೆ ಮೊರೆ ಹೋಗಿದ್ದಾರೆ.
ವಾದ-ಪ್ರತಿವಾದ: ಲಕ್ಷ್ಮಿ ಅವರು ಸಮರ್ಥ ಅಧಿಕಾರಿಯಾಗಿದ್ದವರು. ಸಿಬಿಐ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಸಾಕ್ಷಿದಾರರಿಗೆ ಯಾವುದೇ ಬೆದರಿಕೆ, ಆಮಿಷಗಳು ಇಲ್ಲ ಹೀಗಾಗಿ ಜಾಮೀನು ನೀಡಬೇಕು ಎಂದು ಲಕ್ಷ್ಮಿ ಪರ ವಕೀಲ ಎಲ್ ನಾಗೇಶ್ವರ ರಾವ್ ವಾದ ಮಂಡಿಸಿದ್ದರು.
ಆದರೆ, ಸಿಬಿಐ ವಿಚಾರಣೆ ಇನ್ನೂ ಮುಗಿದಿಲ್ಲ. ಓಬಳಾಪುರಂ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ಅವರನ್ನು ಬೆಂಗಳೂರಿಗೆ ವಿಚಾರಣೆಗೆ ಕರೆದೊಯ್ಯಲಾಗಿದೆ. ಶ್ರೀಲಕ್ಷ್ಮಿ ಅವರಿಗೆ ಜಾಮೀನು ನೀಡಿದರೆ ಅತ್ತ ಗಾಲಿ ರೆಡ್ಡಿ ಕೂಡಾ ಜಾಮೀನು ಅರ್ಜಿ ಹಾಕಿ ಇದೇ ರೀತಿ ವಾದ ಮಂಡಿಸುವ ಸಾಧ್ಯತೆಯಿದೆ. ಹಾಗಾಗಿ ಲಕ್ಷ್ಮಿ ಅವರಿಗೆ ಜಾಮೀನು ನೀಡಬಾರದು ಎಂದು ಹೆಚ್ಚುವರಿ ಸಾಲಿಸಿಟರ್ ಜನರ್ ವಿವೇಕ್ ವಾದವನ್ನು ನ್ಯಾಯಾಲಯ ಪುರಸ್ಕರಿಸಿದೆ.












Click it and Unblock the Notifications