ಹದಿನಾಲ್ಕರ ಅಭಿಷೇಕನ ಕೊಂದಿದ್ದು ಪಾಪಿಷ್ಟ ಲವ್ವು

ಪ್ರೇಮಾಭಿಷೇಕಂ: ಬಂಧಿತರೆಲ್ಲ ಅಭಿಷೇಕನ ಗೆಳೆಯರು. ಇವರಲ್ಲಿ ಇಬ್ಬರು ಶಾಲೆ ಬಿಟ್ಟಿದ್ದರು. ಮೃತ ಅಭಿಷೇಕ ಸೇರಿದಂತೆ ಈ ಎಲ್ಲ ಗೆಳೆಯರೂ ತಲಾ ಒಂದೊಂದು ಹುಡುಗಿಯ ಪ್ರೇಮಪಾಶದಲ್ಲಿದ್ದರು. ಎಲ್ಲರೂ ಒಟ್ಟಿಗೆ ಜಾಲಿಯಾಗಿಯೇ ತಿರುಗಾಡಿಕೊಂಡಿದ್ದರು.
ಆದರೆ ಅಭಿಷೇಕ ಪ್ರೀತಿಸುತ್ತಿದ್ದ ಹುಡುಗಿ ಆ ನಾಲ್ವರು ಹುಡುಗರ ಪೈಕಿ ಒಬ್ಬನ ಸೋದರಿ. ಈ ವಿಷಯ ಶಾಲಾ ಸಹಪಾಠಿಗಳ ಮಧ್ಯೆಯೂ ಸುಳಿದಾಡಿತ್ತು. ಇದರಿಂದ ಈ ಗೆಳೆಯರು ಕೆಲವು ಬಾರಿ ಗಲಾಟೆಗಳನ್ನೂ ಮಾಡಿಕೊಂಡಿದ್ದಾರೆ. ಅದೇ ದ್ವೇಷದಲ್ಲಿ ಅಭಿಷೇಕನ ಮೇಲೆ ಸೇಡುತೀರಿಸಿಕೊಳ್ಳಲು ನಾಲ್ವರೂ ಸೇರಿ ಕೊಲೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಟ್ಟಮಡುವಿನ ನಿವಾಸಿಗಳಾದ ವೀರೇಗೌಡ ಹಾಗೂ ಲಕ್ಷ್ಮಮ್ಮ ಅವರ ಮಗ ಅಭಿಷೇಕನನ್ನು ಹೊಸಕೆರೆಹಳ್ಳಿ ಬಳಿಯ ಹನುಮಗಿರಿಯಲ್ಲಿ ಕೊಂದು ಶವವನ್ನು ಸುಬ್ರಮಣ್ಯಪುರದಲ್ಲಿ ಸೋಮವಾರ (ಮಾ. 26) ಸಂಜೆ ಎಸೆದು ಆರೋಪಿಗಳು ಪರಾರಿಯಾಗಿದ್ದರು.












Click it and Unblock the Notifications