• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೂತನ ಮುಖ್ಯಮಂತ್ರಿಯಾಗಿ ಶೋಭಾ ಕರಂದ್ಲಾಜೆ!

By Prasad
|
Shobha Karandlaje new Chief Minister of Karnataka
ಬೆಂಗಳೂರು, ಏ. 1 : ಕರ್ನಾಟಕ ರಾಜಕೀಯದಲ್ಲಿ ಹೊಸ ಶಕೆ ಆರಂಭವಾಗಿದ್ದು, ರಾತ್ರೋರಾತ್ರಿ ನಡೆದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರನ್ನು ಪದಚ್ಯುತಗೊಳಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಯಕೆಯಂತೆ ಇಂಧನ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ ಅವರನ್ನು ಕರ್ನಾಟಕದ ನೂತನ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಲಾಗಿದೆ.

ಈ ವಿನೂತನ ಬೆಳವಣಿಗೆ ಯಡಿಯೂರಪ್ಪನವರ ಬೆಂಬಲಿಗ ಪಾಳಯದಲ್ಲಿ ಹರ್ಷದ ಹೊನಲನ್ನು ಹರಿಸಿದ್ದರೆ, ಅವರ ವಿರೋಧಿ ಬಣಕ್ಕೆ ಊಹಿಸಿಕೊಳ್ಳಲಾಗದ ಶಾಕ್ ನೀಡಿದೆ. ಯಡಿಯೂರಪ್ಪನವರ ಬಣ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂತಸ ಹಂಚಿಕೊಳ್ಳುತ್ತಿದ್ದರೆ, ಅವರ ಕಟ್ಟಾ ವಿರೋಧಿಗಳು ಯಾವ ಪ್ರತಿಕ್ರಿಯೆಗಳಿಗೂ ಸಿಗುತ್ತಿಲ್ಲ.

ಇದರಿಂದಾಗಿ ಒಂದೇ ಸರಕಾರದಲ್ಲಿ ಐದು ವರ್ಷಗಳಲ್ಲಿ ಕರ್ನಾಟಕದ ಜನತೆ ಮೂವರು ಮುಖ್ಯಮಂತ್ರಿಗಳನ್ನು ಕಂಡಂತಾಗಿದೆ. ಹಾಗೆಯೆ, ಮೊತ್ತಮೊದಲ ಬಾರಿಗೆ ಮೊದಲ ಮಹಿಳಾ ಮುಖ್ಯಮಂತ್ರಿಯನ್ನು ಪಡೆದ ಸಂತಸ ಜನತೆಯದ್ದು. ಹಾಗೆಯೆ, ಯಶವಂತಪುರದಿಂದ ವಿಧಾನಸಭೆಗೆ ಆಯ್ಕೆಯಾದ ಮೊದಲ ಬಾರಿಯೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಹೆಗ್ಗಳಿಕೆಯೂ 'ಕರ್ನಾಟಕದ ಕ್ಲಿಯೋಪಾತ್ರ' ಶೋಭಾ ಕರಂದ್ಲಾಜೆ ಅವರದು.

ಸದಾನಂದ ಗೌಡರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ, ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಪ್ರತಿಬಾರಿ ಪ್ರಶ್ನೆ ಎದ್ದಾಗ ಉತ್ತರಿಸುತ್ತಿದ್ದ ದೆಹಲಿಯ ಬಿಜೆಪಿ ಹಿರಿಯ ನಾಯಕರು, ಯಡಿಯೂರಪ್ಪನವರ ಬೇಡಿಕೆಗೆ ಬಗ್ಗಿದ್ದು ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೂ ಆಶ್ಚರ್ಯ ತಂದಿದೆ. ಮುಖ್ಯಮಂತ್ರಿ ಪಟ್ಟ ನಿರೀಕ್ಷಿಸದಿದ್ದ ಶೋಭಾ ಅವರಿಗೂ ಇದು ಹಿತವಾದ ಶಾಕ್ ಕೂಡ.

ಅನೇಕ ಹಗರಣಗಳಿಂದ ಹೊರಬರದ ಹೊರತು ಮುಖ್ಯಮಂತ್ರಿ ಪದವಿ ದೊರೆಯುವುದಿಲ್ಲ ಎಂಬುದು ಅರಿವಿಗೆ ಬಂದಿದ್ದೇ, ಶೋಭಾ ಅವರನ್ನೇ ಮುಖ್ಯಮಂತ್ರಿಯಾಗಿ ಮಾಡಬೇಕೆಂದು ಯಡಿಯೂರಪ್ಪನವರು ಬೇಡಿಕೆ ಇಟ್ಟಿದ್ದರು. ಅಕ್ರಮ ಗಣಿಗಾರಿಕೆಯಲ್ಲಿ ಹೆಸರು ಕೇಳಿ ಬಂದಾಗ ಅಧಿಕಾರ ತ್ಯಾಗ ಮಾಡಿದ ಸಂದರ್ಭದಲ್ಲಿಯೂ ಶೋಭಾ ಕರಂದ್ಲಾಜೆ ಅವರೇ ಮುಖ್ಯಮಂತ್ರಿ ಆಗಬೇಕೆಂದು ಪಟ್ಟುಹಿಡಿದಿದ್ದರು. ಕೊನೆಗೂ ಯಡಿಯೂರಪ್ಪನವರ ಹಠವೇ ಗೆದ್ದಂತಾಗಿದೆ. ಇದರ ಬೆನ್ನಹಿಂದೆಯೇ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆಎಸ್ ಈಶ್ವರಪ್ಪ ಅವರು ಕೂಡ ರಾಜೀನಾಮೆ ಬಿಸಾಕಿದ್ದಾರೆ.

ಕರ್ನಾಟಕದಲ್ಲಿ ಪಕ್ಷದ ಅಸ್ತಿತ್ವ ಉಳಿಯಬೇಕಿದ್ದರೆ ಯಡಿಯೂರಪ್ಪನವರ ಬೇಡಿಕೆಗೆ ಮನ್ನಿಸದೆ ಬಿಜೆಪಿ ಹೈಕಮಾಂಡಿಗೆ ಬೇರೆ ದಾರಿಯೇ ಇರಲಿಲ್ಲ ಎಂದು ಹೆಸರು ಹೇಳದ ಹಿರಿಯ ರಾಜಕಾರಣಿಯೊಬ್ಬರು ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. ಸದಾನಂದ ಗೌಡರು ಈ ಬೆಳವಣಿಗೆಯ ನಂತರ ಅಜ್ಞಾತ ಸ್ಥಳಕ್ಕೆ ತೆರಳಿದ್ದರೆ, ಮೇಲುಕೋಟೆ ವೈರಮುಡಿ ಉತ್ಸವದಂದೇ ಚೆಲುವನಾರಾಯಣ ಕೃಪೆಗೆ ಪಾತ್ರರಾಗಿರುವ ಶೋಭಾ ಕರಂದ್ಲಾಜೆ ಅವರು 'ಚೆಲುವಿನ ಚಿತ್ತಾರ' ಚಿತ್ರದ 'ಕನಸೋ ಇದು ನನಸೋ ಇದು' ಎಂಬ ಹಾಡನ್ನು ಹಾಡಿಕೊಳ್ಳುತ್ತಿದ್ದಾರೆ.

ಏಪ್ರಿಲ್ 1, ಭಾನುವಾರದಂದು ಸಂಜೆ ವಿಧಾನಸೌಧದ ಮುಂಭಾಗದಲ್ಲಿ 27ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ಕುಮಾರಿ ಶೋಭಾ ಕರಂದ್ಲಾಜೆ ಅವರು ರಾಜ್ಯದ ಜನತೆಗೆ ಏಪ್ರಿಲ್ ಫೂಲ್ ದಿನದಶುಭಾಶಯಗಳನ್ನು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಶೋಭಾ ಕರಂದ್ಲಾಜೆ ಸುದ್ದಿಗಳುView All

English summary
Yeshwanthpur MLA Kumari Shobha Karandlaje has taken over as 27th Chief Minister of Karnataka, after BJP high command dethroned DV Sadananda Gowda as CM of Karnataka, as per wishes of BS Yeddyurappa. Shobha Karandlaje has wished citizen of Karnataka Very Happy Fools Day.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more