ಬಾಟಲಿಪುತ್ರ ರೇಣುಕಾಗೆ ಲೋಕಾಯುಕ್ತ ಕ್ಲೀನ್‌ಚಿಟ್

ಮಾರ್ಚ್ 21ರಂದು ಬೆಂಗಳೂರಿನ ಜೆಸಿ ನಗರದಲ್ಲಿರುವ ಅಬಕಾರಿ ಇಲಾಖೆಯ ಉಪ ಆಯುಕ್ತ ಮೋಹನ್ ಕುಮಾರ್ ಕಚೇರಿಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ ಸಂದರ್ಭದಲ್ಲಿ 4.5 ಲೀಟರ್ ವಿದೇಶಿ ಮದ್ಯ ಸೇರಿದಂತೆ 24 ಲೀಟರ್‌ನಷ್ಟು ಅಕ್ರಮ ಮದ್ಯ ಹಾಗೂ ನಗದು ಪತ್ತೆಯಾಗಿತ್ತು.
ಈ ಬಗ್ಗೆ ಲೋಕಾಯುಕ್ತ ನ್ಯಾಯಾಲಯ ಮೋಹನ್ ಕುಮಾರ್‌ರನ್ನು ವಿಚಾರಣೆಗೊಳಪಡಿಸಿತ್ತು. ವಿಚಾರಣೆ ವೇಳೆ ಮದ್ಯವನ್ನು ಅಬಕಾರಿ ಸಚಿವ ರೇಣುಕಾಚಾರ್ಯ ಸೂಚನೆ ಮೇರೆಗೆ ಸಂಗ್ರಹಿಸಿಡಲಾಗಿತ್ತು. ಅದನ್ನು ಗೋಲ್ಡನ್ ಫಾಮ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ಅವರ ಬೆಂಬಲಿಗರಿಗೆ ನೀಡುವುದಕ್ಕಾಗಿಯೇ ಸಂಗ್ರಹಿಸಡಲಾಗಿತ್ತು ಎಂದು ಮೋಹನ್ ಕುಮಾರ್ ನ್ಯಾ. ಎನ್.ಕೆ. ಸುಧೀಂದ್ರ ರಾವ್ ಮುಂದೆ ಅವರ ನಿವಾಸದಲ್ಲಿ ಹಾಜರುಪಡಿಸಿದಾಗ ಹೇಳಿಕೆ ನೀಡಿದ್ದರು.
ದಾಳಿ ವೇಳೆ, 25 ಸಾವಿರ ನಗದು ಮತ್ತು ವಿದೇಶಿ ಬ್ರ್ಯಾಂಡ್‌ಗಳ ಮದ್ಯದ ಬಾಟಲಿ ಸೇರಿದಂತೆ 20ಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಪತ್ತೆಯಾಗಿದ್ದವು. ನ್ಯಾಯಾಲಯ ಅಬಕಾರಿ ಸಚಿವ ರೇಣುಕಾಚಾರ್ಯ ವಿರುದ್ಧ ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಸೂಚಿಸಿತ್ತು.
ಲೋಕಾಯುಕ್ತ ಕೊರ್ಟ್‌ಗೆ ಶನಿವಾರ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಿದ್ದು, ಸಚಿವರು ಮೋಹನ್ ಕುಮಾರ್‌ಗೆ ಅವರಿಗೆ ಎರಡ ಬಾರಿ ಕರೆ ಮಾಡಿ ಬಜೆಟ್ ಕುರಿತು ಚರ್ಚೆ ನಡೆಸಿದ್ದಾರೆ. ಆದರೆ ಮಧ್ಯ ಸರಬರಾಜು ಮಾಡು ಎಂದೇನೂ ಹೇಳಿಲ್ಲವೆಂದು ಕೋರ್ಟ್ ಗಮನ ಸೆಳೆದಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ರೇಣುಕಾಚಾರ್ಯ ಆರೋಪ ಮುಕ್ತವಾಗಿದ್ದಾರೆ.












Click it and Unblock the Notifications