ಗಾಯಗೊಂಡವರ ಸಾವಿಗೆ ಹೆದರಿ ಡ್ರೈವರ್ ಆತ್ಮಹತ್ಯೆ

ಹುನಗುಂದದಿಂದ ಸುಳೆಬಾವಿಗೆ ಹೋಗುತ್ತಿದ್ದಾಗ ಚಿದಾನಂದ ಕಟ್ಟಿಮನಿ (36) ಓಡಿಸುತ್ತಿದ್ದ ಟಂಟಂ ವಾಹನ ಮುಲ್ಲುರ ಗ್ರಾಮದ ಬಳಿ ತಲೆಕೆಳಗಾಗಿ ಬಿದ್ದು ನಾಲ್ವರು ಗಾಯಗೊಂಡರು. ಗಾಯಗೊಂಡವರನ್ನು ಹತ್ತಿರದ ಆಸ್ರತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳು ಸತ್ತೇ ಹೋಗಿದ್ದಾರೆಂದು ಚಿದಾನಂದ ತಪ್ಪಾಗಿ ಭಾವಿಸಿದ್ದಾನೆ.
ಆ ಗಾಯಗೊಂಡವರು ಸತ್ತು ತಾನು ಪೊಲೀಸರಿಂದ ತನಿಖೆಗೊಳಗಾಗಿ ಬಂಧನಕ್ಕೊಳಗಾಗಬೇಕೆಂದು ಹೆದರಿದ ಚಿದಾನಂದ ಕಟ್ಟಿಮನಿ ಹತ್ತಿರದಲ್ಲಿದ್ದ ಹೊಲವೊಂದರಲ್ಲಿ ಇದ್ದ ಗಿಡಕ್ಕೆ ನೇಣು ಹಾಕಿಕೊಂಡು ಸತ್ತುಹೋಗಿದ್ದಾನೆ. ಈ ದುರ್ಘಟನೆಯಿಂದ ಚಿದಾನಂದನ ಕುಟುಂಬ ತತ್ತರಿಸಿಹೋಗಿದೆ. ಚಿದಾನಂದನಿಗೆ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಆತನ ಪತ್ನಿ ತೀವ್ರ ಆಘಾತಕ್ಕೀಡಾಗಿದ್ದು, ಕುಟುಂಬದವರು ಆಕ್ರಂದನ ಮುಗಿಲುಮುಟ್ಟಿತ್ತು.
ಅಮ್ಮ ಮಗಳು ಸಾವು : ಶನಿವಾರ ಮಧ್ಯಾಹ್ನ ಸುರಿದ ಭಾರೀ ಅಕಾಲಿಕ ಮಳೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಬಿದಿರುಮಳೆ ಗ್ರಾಮದಲ್ಲಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಗಾಳಿ ಮಳೆಗೆ ಮರವೊಂದು ಬಿದ್ದು ಮ್ಯಾಕ್ಸಿ ಕ್ಯಾಬ್‌ನಲ್ಲಿ ಹೋಗುತ್ತಿದ್ದ ರತ್ಮಮ್ಮ ಮತ್ತು ಆಕೆಯ ಮಗಳು ಪ್ರೀತಿ ದುರಂತ ಸಾವಿಗೀಡಾಗಿದ್ದಾರೆ. ಈ ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.












Click it and Unblock the Notifications