ಸಿಎಂ, ಮಾಜಿ ಸಿಎಂ ನಿವಾಸದಲ್ಲಿ ತಾಜಾ ಸ್ಥಿತಿಯೇನು?
ಬೆಂಗಳೂರು,
ಮಾ.30: ಇತ್ತ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರೇಸ್ ಕೋರ್ಟ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಪೂರ್ವನಿಗದಿಯಂತೆ ಬಿಜೆಪಿ ಶಾಸಕ, ಸಚಿವರಿಗೆ ಬೆಳಗಿನ ಉಪಹಾರ ಉಣಬಡಿಸುತ್ತಿದ್ದಾರೆ. ಯಡಿಯೂರಪ್ಪನವರ ಬಹುತೇಕ ಬೆಂಬಲಿಗರು ಹಾಜರಾಗಿದ್ದು, ಉಪಹಾರ ಮೆಲ್ಲುತ್ತಿದ್ದಾರೆ. ಆದರೆ ಹಾಲಿ ಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಸಚಿವ ಅಶೋಕ್ ಅನುಪಸ್ಥಿತಿ ಎದ್ದುಕಾಣುತ್ತಿದೆ. id="toptextpromo">ಮಾಜಿ
ಸಿಎಂ ಪಕ್ಷದ ಎಲ್ಲರನ್ನೂ ತಿಂಡಿಗೆ ಕರೆದಿರುವಾಗ ಈ ಇಬ್ಬರೂ ನಾಯಕರು ಎಲ್ಲಿ ಹೋದರು ಎಂಬುದು ಕುತೂಹಲ ಮೂಡಿಸಿದೆ. ಆದರೆ ಹಾಲಿ ಸಿಎಂ ಸದಾನಂದಗೌಡರನ್ನು ಅವರ ಅಧಿಕೃತ ನಿವಾಸದಲ್ಲಿ ಪಂಚಮಸಾಲಿ ಮಠಾಧೀಶರು ಸನ್ಮಾನ ಮಾಡುತ್ತಿದ್ದಾರೆ. ಅದೂ ಈಶ್ವರಪ್ಪ ಸಮ್ಮುಖದಲ್ಲಿ. ಇದಕ್ಕೆ ಮುರುಗೇಶ್ ನಿರಾಣಿ ಸಾಕ್ಷಿಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯೆ, ಈ ಎರಡೂ ಪಾಳಯಗಳು ವಿಮುಖವಾಗಿರುವ ಹಿನ್ನೆಲೆಯಲ್ಲಿ ಸಚಿವ ಗೋವಿಂದ ಕಾರಜೋಳ ಕರೆದಿರುವ 'ಲಂಚ್'ಗೆ ಯಾರೆಲ್ಲ ಉಪ್ಪು-ಹುಳಿ ಹಿಂಡುತ್ತಾರೆ, ಯಾರು ಮೆಲ್ಲಗೆ ಸವಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.











Click it and Unblock the Notifications