ಕ್ವಿಜ್‌ನಲ್ಲಿ ಭಾಗವಹಿಸಿ 1.5 ಲಕ್ಷ ರು. ಮತ್ತು ಐಪಾಡ್ ಗೆಲ್ಲಿರಿ

UTPT Quiz fest in Bangalore
ಬೆಂಗಳೂರು, ಮಾ. 29 : ಭಾರತದ ಅತಿ ದೊಡ್ಡ ರಸಪ್ರಶ್ನೆ ಕಾರ್ಯಕ್ರಮ 'Under the Peepal Tree' 2012 ಆರ್.ವಿ. ಇಂಜಿನಿಯರಿಂಗ್ ಕಾಲೇಜಿನ ಆರ್.ವಿ. ಕ್ವಿಜ್ ಕಾರ್ಪ್ ಆಶ್ರಯದಲ್ಲಿ ಮಾರ್ಚ್ 30ರಿಂದ ಏಪ್ರಿಲ್ 1ರವರೆಗೆ ನಡೆಯುತ್ತಿದೆ.

ಭಾರತದ ಅತ್ಯುತ್ತಮ ಕಾಲೇಜುಗಳು ಈ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಭರ್ತಿ 1.5 ಲಕ್ಷ ರು. ಬಹುಮಾನ ಮತ್ತು ಐಪಾಡ್ ಗೆದ್ದವರಿಗಾಗಿ ಕಾದು ಕುಳಿತಿದೆ. ಈ ಕಾರ್ಯಕ್ರಮವನ್ನು ಕ್ಯಾಲಿಫೋರ್ನಿಯಾ ಮೂಲದ ಬೆಂಗಳೂರಿನಲ್ಲಿ ನೆಲೆಯೂರಿರುವ ಕಂಪನಿ RICHO ಇನ್ನೋವೇಷನ್ಸ್ ಪ್ರಾಯೋಜಿಸುತ್ತಿದೆ. ಮೈಸೂರಿನ MYRA ಸ್ಕೂಲ್ ಆಫ್ ಬಿಸಿನೆಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಪ್ರಯೋಜಕರಾಗಿದ್ದಾರೆ.

ಕ್ವಿಜ್ ಮಾಸ್ಟರ್‌ಗಳು ವಿದ್ಯಾರ್ಥಿಗಳ ಜಾಣ್ಮೆ, ಮಾಹಿತಿ ಭಂಡಾರ, ತೀಕ್ಷ್ಣತೆಯನ್ನು ಒರೆಗೆ ಹಚ್ಚಲಿದ್ದಾರೆ. ಭಾಗವಹಿಸುವವರ ಬುದ್ಧಿಮತ್ತೆಯನ್ನು ಮಾತ್ರವಲ್ಲ ಕೇಳುಗರ ಕೂಡ ಈ ಕ್ವಿಜ್ ಕಾರ್ಯಕ್ರಮ ಕೆಣಕಲಿದೆ. ವಿಭಿನ್ನ ಫಾರ್ಮ್ಯಾಟ್ ಇರುವ ಕ್ವಿಜ್ ಆರಂಭದಿಂದ ಕೊನೆಯವರೆಗೆ ಚತುರಮತಿಗಳನ್ನು ಕುರ್ಚಿಯ ತುದಿಗೆ ಕೂಡಿಸಲಿದೆ.

ಕ್ವಿಜ್ ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ.

ಮಾರ್ಚ್ 30, ಶುಕ್ರವಾರ : ಆರ್‌ವಿಸಿಇ, ಮೈಸೂರು ರಸ್ತೆ

1. ಇಂಡಿ-ಜೀನಿಯಸ್ (ದಿ ಇಂಡಿಯಾ ಕ್ವಿಜ್) - ಬೆಳಿಗ್ಗೆ 9.30
2. ಪಿಎಸ್ಐ-ಟೆಕ್ (ವಿಜ್ಞಾನ ಮತ್ತು ತಂತ್ರಜ್ಞಾನ ಕ್ವಿಜ್) - ಮಧ್ಯಾಹ್ನ 2

ಮಾರ್ಚ್ 31, ಶನಿವಾರ, ಆರ್‌ವಿಸಿಇ, ಮೈಸೂರು ರಸ್ತೆ

3. ಗೇಮ್ ಥಿಯರಿ (ದಿ ಸ್ಪೋರ್ಟ್ಸ್ ಕ್ವಿಜ್) - ಬೆಳಿಗ್ಗೆ 9.30
4. Lieut-en-Ent ಕ್ವಿಜ್ (ಸಾಹಿತ್ಯ ಮತ್ತು ಮನರಂಜನೆ ಕ್ವಿಜ್) - ಮಧ್ಯಾಹ್ನ 2

ಏಪ್ರಿಲ್ 1, ಭಾನುವಾರ, ಆರ್‌ವಿ ಟೀಚರ್ಸ್ ಕಾಲೇಜ್, ಜಯನಗರ

5. ಮೇಜರ್ ಕ್ವಿಜ್ (ದಿ ಜೆನರಲ್ ಕ್ವಿಜ್) - ಬೆಳಿಗ್ಗೆ 10
6. ಮ್ಯಾಗ್ನಮ್ ಕ್ವಿಜ್ (ಜೆನರಲ್-ಓಪನ್ ಕ್ವಿಜ್) - ಮಧ್ಯಾಹ್ನ 3

ಮೊದಲ ಐದು ಸುತ್ತುಗಳು ಕಾಲೇಜು ವಿದ್ಯಾರ್ಥಿಗಳಿಗಾಗಿದ್ದರೆ, ಮ್ಯಾಗ್ನಮ್ ಕ್ವಿಜ್‌ನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಅತ್ಯುತ್ತಮ ಕಾರ್ಪೊರೇಟ್ ಮತ್ತು ಅತ್ಯುತ್ತಮ ಶಾಲೆಗೆ ವಿಶೇಷ ಬಹುಮಾನವೂ ಇದೆ. ಇದು 14ನೇ ವಾರ್ಷಿಕ್ ರಸಪ್ರಶ್ನೆ ಕಾರ್ಯಕ್ರಮವಾಗಿದ್ದು, ಕಳೆದ ವರ್ಷ 1,500 ಜನರು ಭಾಗವಹಿಸಿದ್ದರು. ಹೆಚ್ಚಿನ ವಿವರಗಳಿಗೆ ಸಂದರ್ಶಿಸಿ : http://utpt.blogspot.in/

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+