ಬೇಸಿಗೆಯಲ್ಲಿ ಚಿಣ್ಣರಿಗೆ ಮಸ್ತ್ ಸಮ್ಮರ್ ಕ್ಯಾಂಪ್

ಹೌದು, ಮೊದಲ ಬಾರಿಗೆ ಮಕ್ಕಳನ್ನು ಪರಿಸರ, ಸಾಹಸ ಇತ್ಯಾದಿಗಳ ಪರಿಚಯ ಮಾಡಿಕೊಡಲು ಕಿಂದರಜೋಗಿ ಹಲವಾರು ವರ್ಷಗಳಿಂದ ಮಕ್ಕಳನ್ನು ನಿಸರ್ಗದ ಮಡಿಲಿಗೆ ಕೊಂಡೊಯ್ಯುತ್ತಿರುವ ಬ್ಯಾಕ್‌ಪ್ಯಾಕರ್ಸ್ ತಂಡದೊಡನೆ ಒಂದಾಗಿದೆ.
9 ರಿಂದ 15 ವರ್ಷದ ಪುಟಾಣಿಗಳು ಕಿಂದರಜೋಗಿ ಮತ್ತು ಬ್ಯಾಕ್‌ಪ್ಯಾಕರ್ಸ್ ಜೊತೆಗೆ ಈ ಬೇಸಿಗೆಯಲ್ಲಿ ಸೋಮ್ವಾರ್ ಪೇಟೆಯ ಪೇಮಲ್ಲಳ್ಳಿ ಜಲಪಾತದ ಹತ್ತಿರ 3 ದಿನಗಳ ಕಾಲ ಬೇಸಿಗೆ ಕಳೆಯಬಹುದು.
ಆಟ, ಆಟದ ಜೊತೆಗೆ ಪಾಠ, ಮತ್ತೆ ಊಟ ಕೂಡ. ನಿಸರ್ಗದ ಮಡಿಲಲ್ಲೇ ಇದ್ದು, ಅದರ ದಿನನಿತ್ಯದ ಕಾರ್ಯವೈಖರಿಯನ್ನು, ಅದರ ಜೊತೆಗೆ ಬೆರೆಯುವ ಪರಿಯನ್ನು ಪರಿಚಯಿಸಲು ಈ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮ.
ಏಪ್ರಿಲ್ 12ರಿಂದ 16ರ ವರೆಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಿಂದ ಏಪ್ರಿಲ್ 12ರ ರಾತ್ರಿ 9.30ಗೆ ಹೊರಟು, ಇದೇ ಸ್ಥಳಕ್ಕೆ 16ನೇ ತಾರೀಖು ಬೆಳಗ್ಗೆ 9.30ಕ್ಕೆ ಹಿಂತಿರುಗುವ ಯೋಜನೆ ಇದೆ. 9 ವಯಸ್ಸಿನ ಮಕ್ಕಳಿಂದ 15 ವರ್ಷದೊಳಗಿನವರಿಗೆ ಮಾತ್ರ ಆದ್ಯತೆ.
ಕಾರ್ಯಕ್ರಮದ ವೆಚ್ಚ: 3,500 ರೂಗಳು
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಲಕ್ಷ್ಮೀನಾರಯಣ ವಿ : 94496 49236/ 97318 73096/ 080-22582877
ದೀಪಕ್ : 94498 00754
ಪ್ರಸನ್ನ : 98444 86896/94480 88415
ಹಾಗೂ ಕಿಂದರಜೋಗಿ ವೆಬ್ ತಾಣಕ್ಕೆ ಭೇಟಿ ಕೊಡಿ
ಬೆಂಗಳೂರಿನ ಸಮ್ಮರ್ ಕ್ಯಾಂಪ್ ಗಳ ಪಟ್ಟಿ ಕರ್ನಾಟಕ.ಕಾಂ ವೆಬ್ ತಾಣದಲ್ಲಿ ಲಭ್ಯವಿದೆ ಆಸಕ್ತರು ಭೇಟಿ ಕೊಡಿ












Click it and Unblock the Notifications