ಶ್ರೀರಾಮುಲು-ರಕ್ಷಿತಾ ಜೋಡಿ ಗಾಲಿ ರೆಡ್ಡಿ 'ವಿ' ಚಾಟ್

ಬಡವರ ಶ್ರಮಿಕರ ರೈತರ (ಬಿಎಸ್‌ಆರ್) ಪಕ್ಷದ ಸ್ಥಾಪಕ ಶ್ರೀರಾಮುಲು ಅವರೊಂದಿಗೆ ರಕ್ಷಿತಾ ಅವರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ಕೊಟ್ಟಿದ್ದಾರೆ.
ಶ್ರೀರಾಮುಲು ಅವರ ಜೊತೆ ರಕ್ಷಿತಾ ಅವರು ಸಂದರ್ಶಕರ ಕೊಠಡಿಯಲ್ಲಿ ಕುಳಿತ್ತಿದ್ದಾಗ, ಜನಾರ್ದನ ರೆಡ್ಡಿ ಅವರು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದರು. ವಿಚಾರಣೆ ಏಪ್ರಿಲ್ ಮೊದಲ ವಾರಕ್ಕೆ ಮುಂದೂಡಲಾಗಿದೆ.
ನಂತರ ಇಬ್ಬರನ್ನು ಭೇಟಿ ಮಾಡಿದ ಜನಾರ್ದನ ರೆಡ್ಡಿ ಅವರು ರಕ್ಷಿತಾ ಅವರನ್ನು ತುಂಬು ಹೃದಯದಿಂದ ಸ್ವಾಗತಿಸಿದರು. ಬಿಎಸ್ ಆರ್ ಪಕ್ಷದ ಮೂಲಕ ಬಡವರ ಏಳಿಗೆಗೆ ದುಡಿಯುವಂತೆ ಕೇಳಿಕೊಂಡರು. ಬದಲಿಗೆ ಗಾಲಿ ರೆಡ್ಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ರಕ್ಷಿತಾ, ಶೀಘ್ರದಲ್ಲೇ ಆರೋಪ ಮುಕ್ತರಾಗಿ ಹೊರ ಬರುವಂತೆ ಹಾರೈಸಿದರು.
ಮುಂದಿನ ಚುನಾವಣೆಯಲ್ಲಿ ಬಿಎಸ್ ಆರ್ ಪಕ್ಷ ನಿರ್ಣಾಯಕ ಪಾತ್ರವಹಿಸಲಿದೆ. ಪಕ್ಷ ಸಂಘಟನೆ ಕಾರ್ಯದಲ್ಲಿ ಶ್ರೀರಾಮುಲು ಅವರ ಸಲಹೆ ಪಡೆಯಿರಿ ಎಂದು ರಕ್ಷಿತಾ ಅವರಿಗೆ ರೆಡ್ಡಿ ಕಿವಿಮಾತು ಹೇಳಿದ್ದಾರೆ.
ರೆಡ್ಡಿಗಾಗಿ ವಿ ಚಾಟ್ ವ್ಯವಸ್ಥೆ : ಬೆಳಗ್ಗೆ 10 ಗಂಟೆಗೆ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದ ಶ್ರೀರಾಮುಲು ಹಾಗೂ ರಕ್ಷಿತಾ ಮಧ್ಯಾಹ್ನ 1 ಗಂಟೆವರೆಗೂ ಗಾಲಿ ರೆಡ್ಡಿ ದರ್ಶನ ಸಿಗದೇ ಪರಿತಪಿಸಿದರು. ನಂತರವೂ ಕೂಡಾ ಗಾಲಿ ರೆಡ್ಡಿ ಅವರನ್ನು ಮುಖತಃ ಭೇಟಿ ಮಾಡಲು ಜೈಲಿನ ಅಧಿಕಾರಿಗಳು ನಿರಾಕರಿಸಿದರು.
ಕೊನೆಗೆ ರಕ್ಷಿತಾ ಮೇಡಂ ಮುಖ ನೋಡಿಕೊಂಡು, ವಿಡಿಯೋ ಕಾನ್ಫರೆನ್ಸ್ ಮೂಲಕ ಮೂವರಿಗೂ ಸಂಪರ್ಕ ಕಲ್ಪಿಸಿ ಮಾತನಾಡಲು ಅವಕಾಶ ನೀಡಲಾಯಿತು. ಹಿರಿಯ ನಾಯಕರ ಆಶೀರ್ವಾದ ಪಡೆದ ರಕ್ಷಿತಾ, ಪಕ್ಷ ಏಳಿಗೆಗೆ ಶ್ರಮಿಸಲಿ ಹೆಚ್ಚಿನ ಹುಮ್ಮಸ್ಸು ಪಡೆದುಕೊಂಡು ಜೈಲಿನಿಂದ ಹೊರನಡೆದರು.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications