ಏರಿಸಿದ್ದ ರೈಲ್ವೆ ಪ್ರಯಾಣ ದರ ಇಳಿಸಿದ ಯುಪಿಎ
ನವದೆಹಲಿ,
ಮಾ. 22 : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಕೇಂದ್ರದ ಮಾಜಿ ರೇಲ್ವೆ ಸಚಿವ ಮಮತಾ ಬ್ಯಾನರ್ಜಿ ಅವರ ಹಠಮಾರಿತನವೇ ಗೆದ್ದಿದೆ. ಮಾರ್ಚ್ 14ರ ರೈಲ್ವೆ ಬಜೆಟ್ಟಿನಲ್ಲಿ ಏರಿಸಲಾಗಿದ್ದ ರೈಲ್ವೆ ಟಿಕೆಟ್ ದರವನ್ನು, ಮಮತಾ ಅವರ ಆಗ್ರಹಕ್ಕೆ ತಕ್ಕಂತೆ ಹಿಂತೆಗೆದುಕೊಳ್ಳಲಾಗಿದೆ. id="toptextpromo">ಅಂದು
ಬಜೆಟ್ ಮಂಡಿಸಿದ ದಿನೇಶ್ ತ್ರಿವೇದಿ ಅವರನ್ನು ಪದಚ್ಯುತಿಗೊಳಿಸಿದ ನಂತರ ನೇಮಕಗೊಂಡಿರುವ ಮುಕುಲ್ ರಾಯ್ ಅವರು, ರೈಲ್ವೆ ಪ್ರಯಾಣ ದರದಲ್ಲಿ ಯಾವುದೇ ಏರಿಕೆ ಇರುವುದಿಲ್ಲ ಎಂದು ಲೋಕಸಭೆಯಲ್ಲಿ ಗುರುವಾರ ತಿಳಿಸಿದರು. ರೈಲ್ವೆ ಬಜೆಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯಾಣ ದರಗಳನ್ನು 10 ಪೈಸೆಯಿಂದ 30 ಪೈಸೆವರೆಗೆ ಏರಿಸಲಾಗಿತ್ತು. id='are-slot-1' class='oiad oi-axt oiadv'> id='top-searched-articles'>ಆದರೆ,
ಬಜೆಟ್ ಮಂಡನೆಯ ನಂತರ, ತಮ್ಮ ಸಲಹೆ ಕೇಳಿಲ್ಲ ಎಂದು ಮಮತಾ ತ್ರಿವೇದಿ ಮೇರೆ ರಾಂಗ್ ಆಗಿದ್ದರು ಮತ್ತು ಕೊನೆಗೆ ಪಾರ್ಲಿಮೆಂಟಿನಲ್ಲಿ ಬಜೆಟ್ ಕುರಿತು ಚರ್ಚೆ ನಡೆಯುವ ಮೊದಲೇ ಅವರನ್ನು ಪದಚ್ಯುತಿಗೊಳಿಸುವಲ್ಲಿಯೂ ಸಫಲರಾಗಿದ್ದರು. ತೃಣಮೂಲ ಕಾಂಗ್ರೆಸ್ ಪಕ್ಷದ 19 ಸಚಿವರು ಯುಪಿಎನಲ್ಲಿದ್ದಾರೆ.











Click it and Unblock the Notifications