ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಸದ್ಯಕ್ಕೆ ಬಚಾವ್

ಬೆಂಗಳೂರು,ಮಾ.21: ಗುಲ್ಬರ್ಗಾ ಯಾನಾಗುಂಡಿಯ ಮಾತೆ ಮಾಣಿಕೇಶ್ವರಿ ಶಂಕರ ಬಿದರಿ ಅವರ ಮೇಲೆ ಕೃಪೆ ತೋರಿದಂತಿದೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಶಂಕರ ಮಹಾದೇವ ಬಿದರಿ ಅವರೇ ಮಾ. 30ರ ವರೆಗೆ ಮುಂದುವರಿಯಲಿ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮಂಗಳವಾರ ಸೂಚನೆ ನೀಡಿದೆ. ನವೆಂಬರ್ 30 ರಂದು ಬಿದರಿ DG-IGP ಆಗಿ ನೇಮಕಗೊಂಡಿದ್ದರು.

UPSC ನಿಯಮಾನುಸಾರವೇ ಶಂಕರ ಬಿದರಿ ಅವರನ್ನು ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನಾಗಿ ನೇಮಿಸಿದ್ದೇವೆ ಎಂದು ರಾಜ್ಯ ಸರಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಮುಂದಿನ ವಿಚಾರಣೆಯನ್ನು ಮಾ. 28ಕ್ಕೆ ಮುಂದೂಡಿದ್ದು, ಅದೇ ದಿನ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದಿಲೀಪ್ ಡಿ. ಬೋಸ್ಲೆ ಮತ್ತು ಬಿ.ಎಸ್. ಇಂದ್ರಕಲಾ ಅವರನ್ನೊಳಗೊಂಡ ಹೈಕೋರ್ಟ್‌ನ ವಿಭಾಗೀಯ ಪೀಠ ಕೇಂದ್ರ ಲೋಕಸೇವಾ ಆಯೋಗ, ಪ್ರತಿವಾದಿ ಎ.ಆರ್. ಇನ್ಫಾಂಟ್ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಅವರಿಗೆ ನೋಟಿಸ್ ನೀಡಿ ಮಾ. 28ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶಿಸಿದೆ.

ಏನಾಗಿತ್ತೆಂದರೆ ಸೇವಾ ಹಿರಿತನ, CR ಕಡೆಗಣಿಸಿ, ಜತೆಗೆ ಬಿದರಿ ಬಗ್ಗೆ ಮಾಹಿತಿ ಮರೆಮಾಚಿ UPSCಅನ್ನು ತಪ್ಪುದಾರಿಗೆಳೆದು ಬಿದರಿಯನ್ನು ನೇಮಕ ಮಾಡಲಾಗಿದ ಎಂದು ಆರೋಪಿಸಿ, ಆ ಸ್ಥಾನದ ಆಕಾಂಕ್ಷಿ ಅಗ್ನಿಶಾಮಕ ಮತ್ತು ಗಹ ರಕ್ಷಕದಳದ ಪೊಲೀಸ್ ಮಹಾ ನಿರ್ದೇಶಕ ಎ.ಆರ್. ಇನ್ಫಾಂಟ್ ಅವರು ಕೇಂದ್ರ ಆಡಳಿತ ನ್ಯಾಯಾಧಿಕರಣ (ಸಿಎಟಿ) ಮೊರೆಹೋಗಿದ್ದರು.

ಅದರಂತೆ ಮಾ. 16ರಂದು ಸಿಎಟಿ ಶಂಕರ ಬಿದರಿ ನೇಮಕಾತಿಯನ್ನು ಅಸಿಂಧುಗೊಳಿಸಿ ಅಗ್ನಿಶಾಮಕ ಮತ್ತು ಗಹ ರಕ್ಷಕದಳದ ಪೊಲೀಸ್ ಮಹಾ ನಿರ್ದೇಶಕ ಎ.ಆರ್. ಇನ್ಫಾಂಟ್ ಅವರನ್ನು ಹಂಗಾಮಿ ಡಿಜಿಪಿಯಾಗಿ ನೇಮಕ ಮಾಡುವಂತೆ ಸೂಚಿಸಿ ತೀರ್ಪು ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+