ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ಯಡಿಯೂರಪ್ಪಗೆ ಶುರುವಾಯ್ತು ಸಿಬಿಐ ಭಯ

By Mahesh
|
Google Oneindia Kannada News

BSY in Jindal Bangalore
ಬೆಂಗಳೂರು, ಮಾ.20: ಅಧಿಕಾರಕ್ಕಾಗಿ ಅವಿರತವಾಗಿ ಹಗ್ಗ ಜಗ್ಗಾಟ ಮುಂದುವರೆಸಿರುವ ಮಾಜಿ ಸಿಎಂ ಯಡಿಯೂರಪ್ಪ ಅವರ ಕನಸಿಗೆ ಕತ್ತರಿ ಹಾಕಲು ಸಿಇಸಿ ಸಜ್ಜಾಗಿದೆ.

ಸುಪ್ರೀಂ ಕೋರ್ಟು ರಚಿಸಿರುವ ಕೇಂದ್ರೀಯ ಉನ್ನತ ಸಮಿತಿ(ಸಿಇಸಿ) ತೂಗುಗತ್ತಿಯ ಕೆಳಗೆ ಸಿಕ್ಕಿ ಹಾಕಿಕೊಂಡಿರುವ ಯಡಿಯೂರಪ್ಪ, ಸಿಬಿಐ ತನಿಖೆ ಭೀತಿ ಎದುರಿಸುತ್ತಿದ್ದಾರೆ.

ಸಿಬಿಐ ತನಿಖೆಗೆ ಆಗ್ರಹಿಸಿ ಧಾರವಾಡ ಮೂಲದ ಸಮಾಜ ಪರಿವರ್ತನ ಸಮುದಾಯವು (ಎಸ್‌ಪಿಎಸ್) ಸಲ್ಲಿಸಿದ ಅರ್ಜಿಯನ್ನು ಗಂಭಿರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟು ಸಿಇಸಿ ವರದಿ ಆಧಾರದ ಮೇಲೆ ಸಿಬಿಐ ತನಿಖೆಗೆ ಆದೇಶಿಸುವ ಸಾಧ್ಯತೆ ನಿಚ್ಚಳವಾಗಿದೆ.

ದೆಹಲಿ ಯಡ್ಡಿ ನೋ ಚಾನ್ಸ್ ? : ಮಾ.20 ರಂದು ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಅಥವಾ ಪ್ರತಿನಿಧಿಯ ಮೂಲಕ ಸಿಇಸಿ ಕಚೇರಿಗೆ ಹಾಜರಾಗುವಂತೆ ಆದೇಶಿಸಲಾಗಿದೆ. ಆದರೆ, ಬೆಂಗಳೂರಿನ ರೆಸಾರ್ಟ್ ನಲ್ಲಿ ಬೀಡುಬಿಟ್ಟಿರುವ ಯಡಿಯೂರಪ್ಪ ತಮ್ಮ ಪ್ರತಿನಿಧಿಯಾಗಿ ಅಶೋಕ್ ಹಾರ್ನಳ್ಳಿ ಅವರನ್ನು ದೆಹಲಿಗೆ ಕಳುಹಿಸಲಿದ್ದಾರೆ.

ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕೇ ಬೇಡವೇ ಎಂಬುದು ತೀರ್ಮಾನವಾಗಲಿದ್ದು, ಯಡಿಯೂರಪ್ಪ ಸೇರಿದಂತೆ ಜೆಎಸ್‌ಡಬ್ಲ್ಯೂ ಲಿಮಿಟೆಡ್ ಮತ್ತು ಅದಾನಿ ಎಂಟರ್‌ಪ್ರೈಸೆಸ್ ಬಗ್ಗೆಯೂ ತನಿಖೆಗೆ ಆದೇಶ ಹೊರಬೀಳಲಿದೆ.

ಮುಂದಿನ ವಾರ ಸಿಇಸಿ ಸಂಸ್ಥೆಯ ಅರಣ್ಯ ವಿಭಾಗ ವಿಚಾರಣೆ ಆರಂಭಿಸಲಿದ್ದು ಅದೇ ವೇಳೆಗೆ ಸಿಇಸಿ ತನ್ನ ಅಂತಿಮ ವರದಿಯನ್ನೂ ಸಲ್ಲಿಸಲಿದೆ. ಆದರೆ, ಮೂಲಗಳ ಪ್ರಕಾರ ಯಡಿಯೂರಪ್ಪ ಕುರಿತ ಆದೇಶದ ವರದಿ ಮುಂಚಿತವಾಗಿ ಕೋರ್ಟ್ ಗೆ ಸಲ್ಲಿಸುವ ಸಾಧ್ಯತೆಯಿದೆ.

English summary
With CEC giving notice to Jindal and Adani Group in Bellary. Yeddyurappa is fearing CBI Probe. NGO Samaj Parivartan Samudaya, counsel Prashant Bhushan is all set battle against Yeddyurappa in Supreme Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X