ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಕೈಗೆ ಸಿಕ್ಕಿದೆ ಉಪಚುನಾವಣೆ ರಿಸಲ್ಟ್

By Mahesh
|
Google Oneindia Kannada News

Hegde and Sunil
ಚಿಕ್ಕಮಗಳೂರು, ಮಾ.20: ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಮಸ್ತ ಮತದಾರರಿಗೆ ಜೆಡಿಎಸ್ ಪಕ್ಷ ಮನತುಂಬಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದು, ಶೇ.60ಕ್ಕೂ ಅಧಿಕ ಮತದಾನವಾಗಿದ್ದು ಪೂರ್ಣ ಫಲಿತಾಂಶಕ್ಕೆ ಅಷ್ಟು ಸಾಕೆನಿಸಿದೆ.

ರಾಜ್ಯದೆಲ್ಲೆಡೆ ಫಲಿತಾಂಶದ ಬಗ್ಗೆ ಕುತೂಹಲ ಹೆಚ್ಚಾಗತೊಡಗಿದೆ. ಈ ಚುನಾ ವಣೆ ನಿಶ್ಚಿತವಾಗಿ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ.

ಕಳೆದ ಮೂರೂವರೆ ವರ್ಷಗಳಲ್ಲಿ ಯಡಿಯೂರಪ್ಪ ಗೈರು ಹಾಜರಿಯಲ್ಲಿ ನಡೆಯುತ್ತಿರುವ ಚುನಾವಣೆ ಇದಾಗಿರುವುದರಿಂದ ಅನೇಕ ಹೊಸ ಸಂದೇಶಗಳು ಫಲಿತಾಂಶದಲ್ಲಿ ಅಡಗಿವೆ. 80 ಸಾವಿರಕ್ಕೂ ಅಧಿಕ ಲಿಂಗಾಯತ ಮತಗಳು ಹರಿದು ಹಂಚಿ ಹೋಗಿದೆ. ಮೇಲ್ನೋಟಕ್ಕೆ ಇಲ್ಲಿ ಬಿಜೆಪಿ ಅಥವಾ ಕಳೆದ ಬಾರಿ ಎರಡನೇ ಸ್ಥಾನದಲ್ಲಿದ್ದ ಕಾಂಗ್ರೆಸ್ ಗೆಲ್ಲುವ ಬಗ್ಗೆ ಗುಪ್ತಚರ ವರದಿ, ಚುನಾವಣೋತ್ತರ ಸಮೀಕ್ಷೆ ಕೂಡಾ ಇದನ್ನೇ ಪ್ರತಿಪಾದಿಸಿದೆ.

ಜೆಡಿಎಸ್ ಪಾತ್ರ ಏನು?: ಸಿಪಿಐ ಬೆಂಬಲಿಸಿದ್ದ ದಳ ಈ ಬಾರಿ ಕಣಕ್ಕಿಳಿದು ಗಂಭೀರ ಹೋರಾಟ ನಡೆಸಿರುವುದರಿಂದ ಸಹಜವಾಗಿ ಲೆಕ್ಕಾಚಾರದಲ್ಲಿ ಗೊಂದಲ ಉಂಟಾಗಿದೆ. ಜಾತ್ಯಾತೀತ ದಳ ಗೆಲ್ಲುವ ಸಾಧ್ಯತೆಯಂತೂ ಇಲ್ಲವೇ ಇಲ್ಲ ಎಂದು ಹೇಳಬಹುದು.

ಆದರೆ ಅದು ಪಡೆಯುವ ಮತ ಫಲಿತಾಂಶದ ಮೇಲೆ ನಿರ್ಣಾಯಕ ಪಾತ್ರ ವಹಿಸುವುದಂತೂ ಖಂಡಿತ. ದಳದ ಸ್ಪರ್ಧೆಯು ಕಾಂಗ್ರೆಸ್ ಗೆ ಭಾರೀ ಹೊಡೆತ ನೀಡಲಿದೆ ಎಂದು ಪ್ರಚಾರದ ಆರಂಭದ ದಿನಗಳಲ್ಲಿ ಊಹಿಸಲಾಗುತ್ತಿತ್ತು.

ಆದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೆ ಬಿಜೆಪಿಗೆ ಬಿದ್ದಿದ್ದ ಮತಗಳನ್ನು ಜೆಡಿಎಸ್ ಈ ಬಾರಿ ಗಣನೀಯ ಪ್ರಮಾಣದಲ್ಲಿ ಪಡೆಯುವ ಸಾಧ್ಯತೆ ಎದ್ದು ಕಾಣುತ್ತಿದೆ.

ಜಾತಿ ಲೆಕ್ಕಾಚಾರ: ಒಕ್ಕಲಿಗರು ಅಧಿಕವಾಗಿರುವ ಮೂಡಿಗೆರೆ ತಾಲ್ಲೂಕಿನಲ್ಲಂತೂ ದಳ ಮುಂದೆ ಹೋಗುವ ಸೂಚನೆ ಇದೆ. ಚಿಕ್ಕಮಗಳೂರು ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರ ಗಳಲ್ಲೂ ದಳ ಹೆಚ್ಚಿನ ಮತ ಗಳಿಸಲಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಲಿಂಗಾಯಿತ ಸಮುದಾಯ ಕಾಂಗ್ರೆಸ್ ಪರ ವಾಲುವ ಮಾತುಗಳು ಕೇಳಿ ಬಂದಿದೆ. ಬಿ.ಜೆ.ಪಿ. ಸರ್ಕಾರ ಹಾಗೂ ನಾಯಕರ ಒಳ ಜಗಳದ ಬಗ್ಗೆ ವ್ಯಾಪಕ ಅಸಮಾಧಾನ ಮತ್ತು ಸ್ಥಳೀಯ ಬಿ.ಜೆ.ಪಿ. ಶಾಸಕರ ವಿರುದ.ದ ಆಕ್ರೋಶದಿಂದ ಚಿಕ್ಕಮಗಳೂರು ಜಿಲ್ಲೆಯ ಮಟ್ಟಿಗೆ ಬಿ.ಜೆ.ಪಿ.ಗೆ ಭಾರೀ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ.

ಹಾಗೆ ನೋಡಿದರೆ ಬಿ.ಜೆ.ಪಿ.ಗೆ ಕರಾವಳಿ ಜಿಲ್ಲೆಗಳು ಭದ್ರ ನೆಲೆ ಒದಗಿಸಿವೆ. ಇಂದು ಕೂಡ ಕರಾವಳಿ ಜನರು ಬಿ.ಜೆ.ಪಿ.ಯನ್ನು ಬಿಟ್ಟು ಕೊಡುವ ಲಕ್ಷಣಗಳು ಕಾಣುತ್ತಿಲ್ಲ. ರಾಜ್ಯದಲ್ಲಿ ಮೊತ್ತ ಮೊದಲ ಅಧಿಕಾರ ಬಿ.ಜೆ.ಪಿ.ಗೆ ಸಿಕ್ಕಿದ್ದು ಉಡುಪಿಯ ಪುರಸಭೆಯ ಮೂಲಕ.

ಕಾಂಗ್ರೆಸ್ ವಿಕ್ಟರಿ: ಒಟ್ಟಾರೆ ಕಾಂಗ್ರೆಸ್ ಈ ಕ್ಷೇತ್ರಗಳಲ್ಲಿ ಗೆಲುವಿನತ್ತ ದಾಪುಗಾಲಿಟ್ಟಿದೆ ಎಂದೇ ಅರ್ಥ. ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರ ಬಗ್ಗೆ ಇಡೀ ಕ್ಷೇತ್ರದಲ್ಲಿ ಸದಭಿಪ್ರಾಯ ಇರುವುದು ಆ ಪಕ್ಷಕ್ಕೆ ಪ್ಲಸ್ ಪಾಯಿಂಟ್. ಕನಿಷ್ಠ 10 ರಿಂದ 15 ಸಾವಿರ ಮತಗಳ ಅಂತರದಿಂದ ಜಯ ಖಾತ್ರಿಯಾಗಿದೆ.

ಬಿಜೆಪಿ ಅಭ್ಯರ್ಥಿ ಸುನಿಲ್‌ಕುಮಾರ್ ಉತ್ಸಾಹೀ ಯುವಕ. ಆದರೆ ಆತನ ಹಿಂದೂ ತತ್ವವೇ ಆತನ ಮೈನಸ್ ಪಾಯಿಂಟ್ ಆಗಿರುವಂತಿದೆ. ಒಲ್ಲದ ಮನಸ್ಸಿನಿಂದ ಚುನಾವಣೆಗೆ ನಿಂತ ಸುನಿಲ್ ಪರ ಇದ್ದ ಹಿಂದುಳಿದ ವರ್ಗಗಳ ಮತ ಹಾಗೂ ಅಲ್ಪ ಸಂಖ್ಯಾತರ ಮತಗಳನ್ನು ಒಡೆಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ.

ದಳ (ಎಸ್) ಅಭ್ಯರ್ಥಿ ಭೋಜೇಗೌಡರ ಕುರಿತು ಆ ಪಕ್ಷದಲ್ಲೇ ವ್ಯಾಪಕ ಅತೃಪ್ತಿ ಇದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೆ ಪ್ರಬಲವಾಗಿದ್ದ ದಳ ಮಸುಕಾಗಲು ಲಕ್ಷ್ಮಯ್ಯನವರ ಮಕ್ಕಳೇ ಮುಖ್ಯ ಕಾರಣ ಎಂಬ ಅಂಶವನ್ನು ದಳದ ನಾಯಕರು, ಮುಖ್ಯವಾಗಿ ಎಚ್.ಡಿ. ಕುಮಾರಸ್ವಾಮಿ ಏಕೆ ಅರ್ಥ ಮಾಡಿಕೊಂಡಿಲ್ಲ ಎಂದು ದಳದ ಕಾರ್ಯಕರ್ತರೇ ಕೇಳುತ್ತಾರೆ.

ಆದರೆ, ಮತದಾರರ ಮೇಲೆ ಕುಮಾರಸ್ವಾಮಿ ಭಾರೀ ಪ್ರಭಾವ ಬೀರಿದ್ದಾರೆ. ಕುಮಾರ ಸ್ವಾಮಿಯವರ ಸಭೆಗಳಿಗೆ ಸೇರುತ್ತಿದ್ದ ಜನರ ಪ್ರಮಾಣ ಈ ಮಾತಿಗೆ ಸಾಕ್ಷಿ
ಎನ್ನಬಹುದು. ಈ ಬಾರಿ ಅಲ್ಲದಿದ್ದರೂ ಮುಂದಿನ ವಿಧಾನಸಭಾ ಚುನಾವಣೆಗೆ ದಳದ ನಾಯಕರ ಪರಿಶ್ರಮಕ್ಕೆ ಫಲ ದೊರೆಯಬಹುದು.

English summary
Udupi Chikmagalur Lok Sabha By election 2012: Voting percentile in many constituencies suggests By poll will have out and out result this time. Jayaprakash Hegde emerges as winning candidate against BJP's Sunil with JDS BhojeGowda spliting the votes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X