ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಶಾಸಕರ ಬಲ ಪಡೆದ ಅಶೋಕ್

By Mahesh
|
Google Oneindia Kannada News

R Ashok
ಬೆಂಗಳೂರು, ಮಾ.20: 'ಯಾರೇ ನಾಯಕರಾಗಲಿ, ಪಕ್ಷದ ಕೇಂದ್ರೀಯ ನಾಯಕತ್ವ ನೀಡುವ ಸಲಹೆ ಸೂಚನೆಗಳಂತೆ ನಾವೆಲ್ಲ ನಡೆದುಕೊಳ್ಳುತ್ತೇವೆ. ಎಲ್ಲ ಬೆಳವಣಿಗೆಗಳಿಗೆ ಹೈಕಮಾಂಡ್ ಅಂತಿಮ ರೂಪ ನೀಡಲಿದೆ' ಎಂಬ ವಿಶ್ವಾಸವಿದೆ ಎಂದು ಬೆಂಗಳೂರಿನ ಶಾಸಕರ ಪರವಾಗಿ ಗೃಹ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ವಿಧಾನಸೌಧದ ಕಚೇರಿಯಲ್ಲಿ ಸಚಿವ ಅಶೋಕ್ ನಡೆಸಿದ ಸಭೆಯಲ್ಲಿ ಸಚಿವ ಎಸ್.ಸುರೇಶ್‌ಕುಮಾರ್, ಶಾಸಕರಾದ ವಿಜಯ್‌ಕುಮಾರ್, ನಂದೀಶ್ ರೆಡ್ಡಿ, ಸತೀಶ್ ರೆಡ್ಡಿ, ಎಂ.ಕೃಷ್ಣಪ್ಪ, ರಘು ಸೇರಿದಂತೆ ಬೆಂಗಳೂರಿನ ಬಹುತೇಕ ಶಾಸಕರು ಪಾಲ್ಗೊಂಡಿದ್ದರು.

ಯಡಿಯೂರಪ್ಪ ನಮ್ಮ ಪಕ್ಷದ ಪ್ರಶ್ನಾತೀತ ನಾಯಕ, ಪಕ್ಷವನ್ನು ಕಟ್ಟಿ ಬೆಳೆಸಿದವರು. ಶಾಸಕರ ಭಾವನೆಯನ್ನು ಅವರು ಹೇಳಿಕೊಂಡಿದ್ದಾರೆ ಅಷ್ಟೆ ಎಂದು ಅಶೋಕ್ ಹೇಳಿದರು.

ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವುದರಿಂದ ನಾಯಕತ್ವದ ವಿಚಾರವನ್ನು ಕೇಂದ್ರೀಯ ಕೋರ್ ಕಮಿಟಿ ನಿರ್ಧಾರ ಕೈಗೊಳ್ಳುತ್ತದೆ. ಯಡಿಯೂರಪ್ಪಗೆ ಸೂಕ್ತಸ್ಥಾನಮಾನ ನೀಡುವ ವಿಚಾರ ಹೈಕಮಾಂಡ್ ಬಿಟ್ಟ ವಿಚಾರ. ಅವರು ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ

ಪ್ರಸ್ತುತ ಬಿಕ್ಕಟ್ಟಿನ ಕುರಿತು ಕೇಂದ್ರದ ನಾಯಕರು ಯಡಿಯೂರಪ್ಪ ಹಾಗೂ ಈಶ್ವರಪ್ಪರೊಂದಿಗೆ ಮಾತುಕತೆ ನಡೆಸಿದ್ದಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದು ಅಶೋಕ್ ಪುನರುಚ್ಚರಿಸಿದರು.ಡಿವಿ ಸದಾನಂದ ಗೌಡರೇ ಮಂಡಿಸಲಿದ್ದಾರೆ ಇದರಲ್ಲಿ ಎಳ್ಳಷ್ಟು ಸಂಶಯಬೇಡ ಎಂದು ಗೃಹ ಸಚಿವ ಆರ್ ಅಶೋಕ್ ಅವರು ಹೇಳಿದ್ದಾರೆ.

English summary
Karnataka Home minister R Ashok said Bangalore MLAs decided to follow Highcommand's decision. Sadananda Gowda should table Budget 2012. Yeddyurappa followers are in confused state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X