ಅಜಾತಶತ್ರು ಆಚಾರ್ಯರಿಗೆ ಇದೆಂಥಾ ಶ್ರದ್ಧಾಂಜಲಿ !?

ಏನಾಯಿತೆಂದರೆ ವಿಎಸ್ ಆಚಾರ್ಯರಿಗೆ ಇಂದು ವಿಧಾನಮಂಡಲದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆಳಮನೆಯಲ್ಲಿ 100ಕ್ಕೂ ಹೆಚ್ಚು ಶಾಸಕರನ್ನು ಹೊಂದಿರುವ ಬಿಜೆಪಿಯ ವತಿಯಿಂದ ಕೇವಲ 34 ಮಂದಿ ಹಾಜರಿದ್ದರು ಎಂಬುದು ನಾಡಿನ ದೌರ್ಭಾಗ್ಯವೇ ಸರಿ.
ಅಳಿದುಳಿದ ಒಂದಿಬ್ಬರು ಮಹಾನುಭಾವರೇ ಆಚಾರ್ಯರಿಗೆ ಶ್ರದ್ಧೆಯಿಂದ ಅಶ್ರುತರ್ಪಣ ಸಲ್ಲಿಸಿದರು ಎಂಬುದು ರಾಜಕೀಯ ವಿಪರ್ಯಾಸ. ಯಡಿಯೂರಪ್ಪ ಬಣದ 65-70 ಶಾಸಕರು ದೂರವುಳಿದ ಕಾರಣ ಸದನ ಬಣಗುಡುತ್ತಿತ್ತು. ಯಡ್ಡಿ ಬಣ ಇನ್ನೂ ಒಂದು ಹೆಜ್ಜೆ ಅಂಧಪತನ ಕಂಡು ರೆಸಾರ್ಟಿನಲ್ಲೇ ಸಂತಾಪ ಸಲ್ಲಿಸಿತು.
ಹಿಂದೂ ಸಂಸ್ಕೃತಿಯ ಪ್ರವಾದಿಯಂತೆ ಬೊಂಬಡಾ ಹೊಡೆಯುವ ಬಿಜೆಪಿ ಮಂದಿಯ ಸ್ಥಿತಿ ಕಂಡು ನಾಡಿನ ಜನತೆಗೆ ನಗಬೇಕೋ, ಅಳಬೇಕೋ ತಿಳಿಯದಾಗಿದೆ. ಅತ್ತ 'ಮೇಲ್ಮನೆ'ಯಲ್ಲಿ, ತನ್ನ ಸಾವಿಗೆ ತಮ್ಮದೇ ಪಕ್ಷದ ನಾಯಕರು ಒಂದೆಡೆ ಸೇರಿ ನಾಲ್ಕು ಹನಿ ಹಾಕದೇ ಹೋದರೇ ಎಂದು ಆಚಾರ್ಯರ ಆತ್ಮ ಮಗ್ಗಲು ಬದಲಿಸಿರಲೂ ಸಾಕು! Shame on You BJP.












Click it and Unblock the Notifications