ಯಡಿಯೂರಪ್ಪ ಬೆಂಬಲಕ್ಕೆ ನಿಂತ ರಾಜ್ಯದ 8 ಸಂಸದರು

ಸದಾನಂದ ಗೌಡ ಅವರಿಗೆ ಅಸೆಂಬ್ಲಿಯಲ್ಲಿ ಬೆಂಬಲವಿಲ್ಲ ಮತ್ತು ಬಹುಮತ ಕೂಡಾವಿಲ್ಲ. ಯಡಿಯೂರಪ್ಪ ಅವರಿಗೆ 60ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ. ಬಿಎಸ್ವೈ ಈಗ ದೋಷಮುಕ್ತರಾಗಿದ್ದಾರೆ, ಹೈಕಮಾಂಡ್ ಕೊಟ್ಟ ಮಾತಿನಂತೆ ನಡೆಯಲಿ ಎಂದು ತುಮಕೂರು ಸಂಸದ ಬಸವರಾಜ್ ಹೇಳಿಕೆ ನೀಡಿದ್ದಾರೆ.
ಯಡಿಯೂರಪ್ಪ ಅವರ ಪುತ್ರ ಮತ್ತು ಶಿವಮೊಗ್ಗ ಸಂಸದ ರಾಘವೇಂದ್ರ ನೇತೃತ್ವದಲ್ಲಿ ತುರ್ತು ಸಭೆ ನಡೆಸಿದ ಎಂಟು ಸಂಸದರು, ನಾವು ಪಕ್ಷದ ವಿರುದ್ದ ನಡೆಯುವುದಿಲ್ಲ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರೇ ಕಾರಣ. ನ್ಯಾಯಾಲಯದಿಂದ ಯಡಿಯೂರಪ್ಪ ಅವರು ದೋಷಮುಕ್ತರಾದರೆ ಮತ್ತೆ ಅವರನ್ನು ಸಿಎಂ ಮಾಡಲಾಗುವುದೆಂದು ಈ ಹಿಂದೆ ಹೈಕಮಾಂಡ್ ಹೇಳಿಕೆ ನೀಡಿತ್ತು, ಅದರ ಪ್ರಕಾರ ನಡೆಯಲಿ ಎಂದು ಸಂಸದರು ಆಗ್ರಹಿಸಿದ್ದಾರೆ.
ಸಭೆಯಲ್ಲಿ ಸಂಸದರಾದ ಜಿ ಎಸ್ ಬಸವರಾಜ್, ಸುರೇಶ ಅಂಗಡಿ, ಪ್ರಭಾಕರ್ ಕೋರೆ, ಬಿ ವೈ ರಾಘವೇಂದ್ರ, ಆಯನೂರು ಮಂಜುನಾಥ್, ಉಮೇಶ್ ಕತ್ತಿ, ಶಿವಕುಮಾರ್ ಉದಾಸಿ, ಜನಾರ್ಧನ ಸ್ವಾಮಿ ಭಾಗವಹಿಸಿದ್ದರು.











Click it and Unblock the Notifications