ನೈಸ್ ಖೇಣಿ 'ಕರ್ನಾಟಕ ಮಕ್ಕಳ ಪಕ್ಷ' ಉದಯ

ಭ್ರಷ್ಟಾಚಾರ ರಹಿತ ಆಡಳಿತ ಮತ್ತು ರೈತ, ನಿರ್ಗತಿಕರ ಏಳಿಗೆ ಪಕ್ಷದ ಪ್ರಮುಖ ಸಿದ್ಧಾಂತವಾಗಿದೆ ಎಂದು ಖೇಣಿ ಹೇಳಿದರು. ನಂತರ ತಮ್ಮ ಭಾಷಣದುದ್ದಕ್ಕೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಹರಿಹಾಯ್ದರು.
ಎಚ್ಡಿಕೆ ಆಸ್ತಿ ಲೆಕ್ಕ ಹಾಕಿ: ಎಚ್ಡಿಕೆ ಬಳಿ ಮೊದಲು 3 ಕೋಟಿ ಇತ್ತು ಸಿಎಂ ಆದ ಮೇಲೆ 103 ಕೋಟಿ ಅಗಿ ಬಿಟ್ಟಿತು. ಆಮೇಲೆ ಆದಾಯ ಹೆಚ್ಚಾದಂತೆ ಒಂದು ಸಾಲಲ್ಲ ಅಂತಾ ಇನ್ನೊಂದು ಮದುವೆ ಮಾಡಿಕೊಂಡರು ಎಂದು ಖೇಣಿ ವ್ಯಂಗ್ಯವಾಡಿದರು.
ಜೆಡಿಎಸ್ ಅಪ್ಪ ಮಕ್ಕಳ ಪಕ್ಷವಾಗಿದೆ. ಇಷ್ಟು ವಯಸ್ಸಾದರೂ ರಾಜಕೀಯದಿಂದ ನಿವೃತ್ತಿ ಹೊಂದದೆ ದೇವೇಗೌಡರು ಏನು ಸಾಧಿಸುತ್ತಿದ್ದಾರೋ ಗೊತ್ತಿಲ್ಲ.
ನಂತರ ಖಾಸಗಿ ವಾಹಿನಿಗಳಿಗೆ ಪ್ರತಿಕ್ರಿಯಿಸಿದ ಖೇಣಿ, ಇರೋ ಫ್ಯಾಕ್ಟ್ಸ್ ಹೇಳಿದ್ದೀನಿ ಅಷ್ಟೇ. 103 ಕೋಟಿ ಹೇಗೆ ಬಂತು ಎಂದು ಎಲ್ಲರಿಗೂ ಗೊತ್ತಿದೆ.
ರಾಜ್ಯಸಭೆಗೆ ಹೋಗಿ ಮಾಡೋದು ಏನಿಲ್ಲ. ಇಲ್ಲೇ ಇದ್ದು ಜನಸೇವೆ ಮಾಡ್ತೀನಿ. ಯಾವ ಪಕ್ಷದ ಆಫರ್ ಒಪ್ಪಿಕೊಳ್ಳಲ್ಲ.
ನೋಡ್ರಿ.. ಮಹಾತ್ಮ ಗಾಂಧೀಜಿ ಏನು ಚುನಾವಣೆ ನಿಂತಿಲ್ಲ. ಆದರೆ, ಅವರ ಮಾತಿಗೆ ಬೆಲೆ ಇತ್ತು. with out position ಕೂಡಾ ಜನಪರ ಕೆಲಸ ಮಾಡಬಹುದು. ನಾನು ಅದನ್ನು ಮಾಡಿ ತೋರಿಸುತೀನಿ. ಕರ್ನಾಟಕ ಮಕ್ಕಳ ಪಕ್ಷಕ್ಕೆ ಗಡಿಭಾಗದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದರು.












Click it and Unblock the Notifications