ಹಾಸನ ಜಿಲ್ಲಾ ಉಸ್ತುವಾರಿ ಒಲ್ಲೆ ಎಂದ ಸಚಿವ ಸೋಮಣ್ಣ

ಹಾಸನ ಮಾತ್ರವಲ್ಲ ಯಾವುದೇ ಜಿಲ್ಲೆಯ ಉಸ್ತುವಾರಿ ಬೇಡ ಎಂದು ಹೇಳಿದ್ದಾರೆ. ವಸತಿ ಸಚಿವನಾಗಿ ಬಡವರಿಗೆ ಅನುಕೂಲವಾಗುವ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ನನ್ನ ನಿರ್ಧಾರದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಜೊತೆ ಮಾತನಾಡಿದ್ದೇನೆ. ಪಕ್ಷದ ಸಭೆಯಲ್ಲೂ ಚರ್ಚೆ ಮಾಡಿದ್ದೇನೆ. ಅಲ್ಲದೆ ಕೆಲ ಕಟ್ಟುಪಾಡು ಮತ್ತು ತೊಳಲಾಟದ ನಡುವೆ ತಾವು ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಅರಿಕೆ ಮಾಡಿದ್ದೇನೆ ಎಂದು ಸೋಮಣ್ಣ ಹೇಳಿದ್ದಾರೆ.
ಜಿಲ್ಲಾ ಬಿಜೆಪಿಯೊಳಗಿನ ಗುಂಪುಗಾರಿಕೆ, ಆಂತರಿಕ ಕಚ್ಚಾಟ ಸೋಮಣ್ಣ ಅವರ ಈ ನಡೆಗೆ ಒಂದು ಕಾರಣವಾದರೆ, ಇತ್ತೀಚೆಗೆ ದಕ್ಷ ಅಧಿಕಾರಿ ಡಾ.ಜಗದೀಶ್ ಅವರ ವರ್ಗಾವಣೆ ಸಂಬಂಧ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ ಅನ್ನೋ ಅಂಶವೂ ಮತ್ತೊಂದು ಕಾರಣ. ಅಲ್ಲದೆ, ಯಡಿಯೂರಪ್ಪ ಅವರ ಮುಂದಿನ ನಡೆಯನ್ನು ಅರಿತಿರುವ ಸೋಮಣ್ಣ ಅಗತ್ಯಕ್ಕೆ ತಕ್ಕಂತೆ ನಡೆ ಇಡುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications